Belagavi NewsBelgaum NewsKannada NewsKarnataka NewsNational

*ಖಡೇಬಜಾರ ಪೊಲೀಸರ ಭರ್ಜರಿ ಬೇಟೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂಗುಡ್ ಶೆಡ್ ರೋಡಿನಲ್ಲಿ ಅನಧಿಕೃತವಾದ ಮದ್ಯ ಸಂಗ್ರಹಿಸಿಟ್ಟಿದ್ದನ್ನು ಬೆಳಗಾವಿ ಪೊಲೀಸರು ಸೀಜ್ ಮಾಡಿದ್ದಾರೆ.‌

ಅನಧಿಕೃತವಾದ ಮದ್ಯದ ಬಗ್ಗೆ ಮಾಹಿತಿ ಸಿಕ್ಕ ಕೂಡಲೆ ಖಡೇಬಜಾರ ಸಿಪಿಐ ಶ್ರೀಶೈಲ ಗಾಬಿ, ಪಿಎಸ್ಐ ಆನಂದ ಆದಗೊಂಡ, ಸಿಬ್ಬಂದಿಗಳಾದ ಎ ಬಿ ಶೆಟ್ಟಿ, ಬಿ ಎಸ್ ರುದ್ರಾಪೂರ. ಬಿ ಎಲ್ ಸರ್ವಿ, ಭರಮಣ್ಣಾ ಕರೆಗಾರ, ಸಂತೋಷ ಬರಗಿ, ಸದಾಶಿವ ಹಲಗಿಮನಿ, ಚನ್ನಪ್ಪ ತೇಲಿ, ಎ ಎಸ್ ಹೇಗ್ಗಣ್ಣಾ ಮೊದಲಾದವರು ಮಾಹಿತಿ ಬಂದ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿ ರಾಕೇಶ ಅನೀಲ ಚೌಗಲೆ (30)ಯನ್ನು ವಶಕ್ಕೆ ಪಡೆದಿದ್ದಾರೆ. 

ವಿವಿಧ ಕಂಪನಿಯ, ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ ಅಂದಾಜು 7,30,000 ರೂ ಮೌಲ್ಯದ 670 ಲೀಟರ್ ಸಾರಾಯಿ ಬಾಟಲಗಳು, ಆರೋಪಿಯ ಹೆಸರಿನಲ್ಲಿರುವ 3 ಲಕ್ಷ ಮೊತ್ತದ ಟಾಟಾ ಕಂಪನಿಯ ಗೂಡ್ಸ್ ವಾಹನ ಹೀಗೆ ಒಟ್ಟು ಅಂದಾಜು 10,30,000ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ‌.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button