Belagavi NewsBelgaum NewsKannada NewsKarnataka NewsPolitics

*ಒಳಸಮೀಸಲಾತಿ ವಿರೋಧಿಸಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ  ತರುತ್ತಿರುವ ಒಳಮೀಸಲಾತಿ ಖಂಡಿಸಿ ಲಂಬಾಣಿ, ಕೊರಮ, ಕೊರಚ ಹಾಗೂ ಭೋವಿ ಸಮಾಜ ನೇತೃತ್ವದಲ್ಲಿ ಇಂದು ಬೆಳಗಾವಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. 

ಇಂದು ನಗರದ ಅಂಬೇಡ್ಕರ್ ಉದ್ಯಾನ ವನದಿಂದ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗಿ ಆಗಿದ್ರು, ಉದ್ಯಾನವನದಿಂದ ಆರಂಭವಾದ ಈ ಪ್ರತಿಭಟನೆಯು ಚನ್ನಮ್ಮ ವೃತ್ತದಲ್ಲಿ ಬಂದು ಸೇರಿತು. ಈ ಸಮಯದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.‌

ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.‌

ಬಂಜಾರಾ, ಭೋವಿ, ಕೊರಚ, ಕೊರವ, ಸಮಾಜಕ್ಕೆ ಜಾರಿ ಮಾಡುತ್ತಿರುವ ಒಳಮೀಸಲಾತಿಯಲ್ಲಿ ದೋಷ ಇದೆ. ದೋಷಪೂರಿತ ದತ್ತಾಂಶ ಪರಿಗಣಿಸಿ ಜಾತಿ ಮೀಸಲಾತಿ ಅವೈಜ್ಞಾನಿಕವಾಗಿ ವರ್ಗೀಕರಿಸಲಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ಬಂಜಾರಾ, ಕೊರಮ, ಭೋವಿ, ಕೊರಚ ಸಮಾಜಗಳಿಗೆ 4.5 % ರಷ್ಟು ಮೀಸಲಾತಿ ಘೊಷಣೆ ಮಾಡಿತ್ತು. ಆದರೆ ಕಾಂಗ್ರೇಸ್ ಸರ್ಕಾರ ಒಟ್ಟು 63 ಸಮುದಾಗಳನ್ನು ಸೇರಿಸಿ 5% ಮೀಸಲಾತಿ ಘೋಷಣೆ ಮಾಡಿದೆ. ಜಾತಿವಾರು ಸ್ಥಿತಿಗತಿಗಳನ್ನು ಸಮೀಕ್ಷೆ ಹಾಗೂ ಗಣತಿ ನಡೆಸಬೇಕು. ಸರ್ಕಾರದ ಈ ನಡೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಲಿದೆ. ಸಹೋದರ ಸಮುದಾಯಗಳ ಓಲೈಕೆಗೆ ಸಿದ್ದರಾಮಯ್ಯ ಸರ್ಕಾರ ಹೀಗೆ ಮಾಡಿದೆ. ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದರು.

Home add -Advt

Related Articles

Back to top button