Belagavi NewsBelgaum NewsKannada NewsKarnataka NewsNationalPolitics

*ಬೆಳಗಾವಿ ಬಿಜೆಪಿ ಗ್ರಾಮೀಣ ಮಂಡಲ ವತಿಯಿಂದ ಬೃಹತ್‌ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಬಿಜೆಪಿ ಗ್ರಾಮೀಣ ಮಂಡಲ ವತಿಯಿಂದ ಸುಳಗಾ, ಹಿಂಡಲಗಾ ಚೆಕ್ಪಪೋಸ್ಟ್ ಬಳಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ಪ್ರತಿಭಟನೆ ಮಾಡಲಾಯಿತು.

ಕಾಂಗ್ರೆಸ್ ಸರ್ಕಾರ ತೈಲ ಬೆಲೆ ಏರಿಕೆ ಖಂಡಿಸಿ ಇಂದು ರಸ್ತೆ ತಡೆ ಬೃಹತ್ ಪ್ರತಿಭಟನೆ ಆಯೋಜನೆ ಮಾಡಲಾಗಿತ್ತು. ಈ ವೇಳೆ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ್ ಜಾದವ್ ಇವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೈತರಿಗೆ ಬಿಜೆಪಿ ಸರ್ಕಾರ ನೀಡುತ್ತಿದ್ದ 4,000 ಸಹಾಯಧನವನ್ನು ನಿಲ್ಲಿಸಿದೆ, ಹಾಲಿನ ಮೇಲಿನ ದರ , ಎಸ್‌ಸಿ, ಎಸ್‌ಟಿ ಸಮಾಜದ 11000 ಕೋಟಿ ರೂಪಾಯಿಯನ್ನು ಮುಸ್ಲಿಂ ಸಮುದಾಯಕ್ಕೆ 10000 ಕೋಟಿಯನ್ನು ನೀಡಿದ್ದಾರೆ‌. ಹೀಗೆ ಬೇರೆ ಬೇರೆ ಅನುದಾನಗಳನ್ನು ಕೂಡಾ ನಿಲ್ಲಿಸಿದ್ದಾರೆ ಎಂದರು.‌

ಬಸ್ ದರ, ವಿದ್ಯುತ್ ದರ ಮತ್ತು ಈಗ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಿ ಸಾಮನ್ಯ ಜನರ ಜೆಬಿಗೆ ಕತ್ತರಿ ಹಾಕಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.‌

ಈ ವೇಳೆ ಮಾಜಿ ಶಾಸಕ ಮನೋಹರ್ ಕಡೂಲ್ಕರ್, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಯುವರಾಜ್ ಜಾದವ್, ಹಿಂಡಲಗಾ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ರಾಮಚಂದ್ರ ಮನೋಳ್ಕರ್, ಕಾಂಗ್ರೆಸ್ ಸರ್ಕಾರದ ತೈಲ ಬೆಲೆ ಏರಿಕೆ ಮಾಡಿದ್ದಕ್ಕೆ ಆಕ್ರೋಶ ಹೊರ ಹಾಕಿದರು.‌

ಪ್ರತಿಭಟನೆ ವೇಳೆ ಸುಮಾರು 1 ಘಂಟೆ ರಸ್ತೆ ತಡೆ ನಡೆಯಿತು. ಇದರಿಂದ ರಸ್ತೆಯ ಎರಡು ಬದಿಯಲ್ಲಿ ವಾಹನಗಳು ಭಾರಿ ಪ್ರಮಾಣದಲ್ಲಿ ನಿಂತಿದ್ದವು.

ಈ ಪ್ರತಿಭಟನೆಯಲ್ಲಿ ಪಂಕಜ ಘಾಡಿ, ಪ್ರದೀಪ್ ಪಾಟೀಲ್, ವಿಲಾಸ್ ತಹಸೀಲ್ದಾರ್, ಅಜಿತ್ ಹಲ್ಕರ್ಣಿ,ಪವನ್ ದೇಸಾಯಿ, ಗಣಪತ ದೇಸಾಯಿ ಕಲ್ಲಪ್ಪ ಸೂತರ್, ಯಲ್ಲೇಶ್ ಕೊಲ್ಕರ್, ಗುರುರಾಜ್ ಹಲ್ಗತ್ತಿ, ಯಾತೇಶ್ ಹೆಬ್ಬಾಳ್ಕರ್ ಭಾಗ್ಯಶ್ರೀ ಕೋಕಿತ್ಕರ್, ಲಷ್ಮಿ ಪರಮೇಕರ್, ಉಷಾ ಸೋನೇವಾಡ್ಕರ್, ಸುಮನ್ ರಾಜಗೋಳ್ಕರ್ ಹಾಗೂ ಬಿಜೆಪಿಯ ಕಾರ್ಯಕರ್ತರು, ಮಹಿಳೆಯರು ಹಾಗೂ ನೆರೆಹೊರೆಯ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button