*ನಿಶಾ ನರಸಪ್ಪ ಇನ್ನಷ್ಟು ವಂಚನೆ ಪ್ರಕರಣ ಬೆಳಕಿಗೆ; ಸಾಲು ಸಾಲು ಪ್ರಕರಣಗಳು ದಾಖಲು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಟ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರು ಹೇಳಿ ವಂಚಿಸುತ್ತಿದ್ದ ಯುವತಿ ನಿಶಾ ನರಸಪ್ಪ ವಿರುದ್ಧ ಮತ್ತಷ್ಟು ಪ್ರಕರಣ ದಾಖಲಾಗಿವೆ.
ಆರೋಪಿ ನಿಶಾ ನರಸಪ್ಪ ಬಂಧನವಾಗುತ್ತಿದ್ದಂತೆ ಹಲವರು ಪೊಲೀಸ್ ಠಾಣೆಗಳಿಗೆ ತೆರಳಿ ಆಕೆಯಿಂದ ತಮಗಾದ ವಂಚನೆ ಬಗ್ಗೆ ದೂರು ನೀಡುತ್ತಿದ್ದಾರೆ.
ಈವೆಂಟ್ ಮ್ಯಾನೇಜ್ ಮೆಂಟ್ ಹೆಸರಲ್ಲಿ ನಿಶಾ, ತಾರಾ ಎಂಬ ಮಹಿಳೆಗೆ 20 ಲಕ್ಷ ವಂಚಿಸಿರುವ ಆರೋಪ ಕೇಳಿಬಂದಿದೆ. ಇ ಸಂಬಂಧ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಕಳೆದ ತಿಂಗಲೇ ಕೇಸ್ದಾಖಲಾಗಿತ್ತು.
ಅಲ್ಲದೇ ನಿಶಾ ವಿರುದ್ದ ಕೋಣನಕುಂಟೆ ಹಾಗೂ ಜ್ಞಾನಭಾರತಿ ಠಾಣೆಯಲ್ಲಿಯೂ ವಂಚನೆ ಪ್ರಕರಾ ದಾಖಲಾಗಿದೆ. ಸದಾಶಿವನಗರದ ಠಾಣೆಯಲ್ಲಿ 35 ಲಕ್ಷ ವಂಚನೆ ಮಾಡಿರುವ ಆರೋಪ ಪ್ರಕರಾದಾಖಲಾಗಿದ್ದು, ಸಾಲದ ರೂಪದಲ್ಲಿ ಹಾಗೂ ಇನ್ವೆಸ್ಟ್ ಮಡಿದರೆ ಲಾಭಾಂಶ ನೀಡುವುದಾಗಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಮೊದಲು ಲಾಭಾಂಶ ಕೊಟ್ಟು ಬಳಿಕ ಎರದರಷ್ಟು ಹಣ ಪಡೆದು ವಂಚಿಸುತ್ತಿದ್ದಳು ಎನ್ನಲಾಗಿದೆ.
ಬೆಂಗಳೂರು ಹೊರವಲಯದ ರೆಸಾರ್ಟ್ ನಲ್ಲಿ ಶೂಟಿಂಗ್ ಮಾಡ್ವುದಾಗಿ ಹೇಳಿ ಮಕ್ಕಳ ಪೋಷಕರಿಗೆ ಹಾಗೂ ಹೊಸದಾಗಿ ಮಾಡೆಲಿಂಗ್ ಲೋಕಕ್ಕೆ ಕಾಲಿಡಲು ಸಜ್ಜಾದ ಯುವ ಪ್ರತಿಭೆಗಳಿಗೆ ವಂಚಿಸುತಿದ್ದಳು ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ