ಮನೆಯಲ್ಲೇ ಮಟಕಾ: ಎಎಸ್ಐ, ಪೇದೆ ಸಸ್ಪೆಂಡ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಮನೆಯೊಂದರಲ್ಲಿ ಅವ್ಯಾಹತವಾಗಿ ಮಟಕಾ ದಂಧೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ತಡೆಯುವಲ್ಲಿ ನಿರ್ಲಕ್ಷ್ಯತನ ವಹಿಸಿದ ಆರೋಪದ ಮೇಲೆ ಓರ್ವ ಎಎಸ್ಐ ಮತ್ತು ಒಬ್ಬ ಕಾನ್ ಸ್ಟೆಬಲ್ ಅವರನ್ನು ಅಮಾನತುಗೊಳಿಸಲಾಗಿದೆ.
ಸವದತ್ತಿ ತಾಲ್ಲೂಕಿನ ಸಿಂದೋಗಿ ಗ್ರಾಮದಲ್ಲಿ ಗ್ರಾಮದ ನಿವಾಸಿಯಾದ ಈರಪ್ಪ ಉಳ್ಳಾಗಡ್ಡಿ ಮತ್ತು ಅವನ ಮಗ ಕೂಡಿಕೊಂಡು ತಮ್ಮ ಮನೆಯಲ್ಲಿ ಅವ್ಯಾಹತವಾಗಿ ಮಟಕಾ ಮತ್ತು ಜೂಜಾಟ ಆಡಿಸುತ್ತಿದ್ದರು.
ನಿರ್ಭೀತಿಯಿಂದ ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಮಟಕಾ ಮತ್ತು ಜೂಜಾಟ ಆಡಿಸುತ್ತಿದ್ದರನ್ನುವ ದೂರು ಬಂದಿತ್ತು.
ಅದನ್ನು ಪರಿಶೀಲನೆ ನಡೆಸಿದಾಗ ಒಬ್ಬ ಎ.ಎಸ್.ಐ ಹಾಗೂ ಒಬ್ಬ ಪೊಲೀಸ್ ಕಾನ್ಸಟೇಬಲ್ ನ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿತನವು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ. ಅವರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಲಾಗಿದೆ. ಪ್ರಕರಣದ ಕುರಿತು ಮುಂದಿನ ವಿಚಾರಣೆಯನ್ನು ಕೈಗೊಂಡು ವರದಿಯನ್ನ ನೀಡುವಂತೆ ರಾಮದುರ್ಗ ಡಿ.ಎಸ್.ಪಿ. ಗೆ ಎಸ್ಪಿ ಲಕ್ಷ್ಮಣ ನಿಂಬರಗಿ ಆದೇಶಿಸಿದ್ದಾರೆ.
ಇದನ್ನೂ ಓದಿ – ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತ್ತು -ಲೋಕೇಶ್ ಕುಮಾರ
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಹಾಗೂ ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ