*ಪ್ರವಾಸಕ್ಕೆ ಹೋಗಿದ್ದ ವೇಳೆ ದುರಂತ: ಮತ್ತಿಘಟ್ಟ ಫಾಲ್ಸ್ ನಲ್ಲಿ ಮುಳುಗಿ ವಿದ್ಯಾರ್ಥಿ ಸಾವು*

ಪ್ರಗತಿವಾಹಿನಿ ಸುದ್ದಿ: ಪ್ರವಾಸಕ್ಕೆಂದು ಹೋಗಿದ್ದ ವಿದ್ಯಾರ್ಥಿ ಮತ್ತಿಘಟ್ಟ ಫಾಲ್ಸ್ ನಲ್ಲಿ ಈಜಲು ಹೋಗಿ ದುರಂತಕ್ಕೀಡಾಗಿರುವ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮತ್ತಿಘಟ್ಟ ಫಾಲ್ಸ್ ನಲ್ಲಿ ಮುಳುಗಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. 18 ವರ್ಷದ ಶಿವೋಹಂ ಅನಂತ್ ತಿವಾರಿ ಮೃತ ವಿದ್ಯಾರ್ಥಿ. ಮಣಿಪಾಲ್ ನ ಎಂ.ಐ.ಟಿಯಲ್ಲಿ ಬಿ.ಟೆಕ್ ಎರಡನೇ ಸೆಮಿಸ್ಟರ್ ಓದುತ್ತಿದ್ದ. ಮಣಿಪಾಲ್ ನ ಬಿಟೆಕ್ ಹಾಗೂ ಜರ್ನಲಿಸಂ ವಿಭಾಗದ ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗಿದ್ದರು. ಹೊನ್ನಾವರ ಹಾಗೂ ಶಿರಸಿ ಮತ್ತಿಘಟ್ಟ ಭಾಗಕ್ಕೆ ತೆರಳಿದ್ದರು. … Continue reading *ಪ್ರವಾಸಕ್ಕೆ ಹೋಗಿದ್ದ ವೇಳೆ ದುರಂತ: ಮತ್ತಿಘಟ್ಟ ಫಾಲ್ಸ್ ನಲ್ಲಿ ಮುಳುಗಿ ವಿದ್ಯಾರ್ಥಿ ಸಾವು*