Kannada NewsKarnataka NewsLatest

*ಪ್ರವಾಸಕ್ಕೆ ಹೋಗಿದ್ದ ವೇಳೆ ದುರಂತ: ಮತ್ತಿಘಟ್ಟ ಫಾಲ್ಸ್ ನಲ್ಲಿ ಮುಳುಗಿ ವಿದ್ಯಾರ್ಥಿ ಸಾವು*

ಪ್ರಗತಿವಾಹಿನಿ ಸುದ್ದಿ: ಪ್ರವಾಸಕ್ಕೆಂದು ಹೋಗಿದ್ದ ವಿದ್ಯಾರ್ಥಿ ಮತ್ತಿಘಟ್ಟ ಫಾಲ್ಸ್ ನಲ್ಲಿ ಈಜಲು ಹೋಗಿ ದುರಂತಕ್ಕೀಡಾಗಿರುವ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮತ್ತಿಘಟ್ಟ ಫಾಲ್ಸ್ ನಲ್ಲಿ ಮುಳುಗಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. 18 ವರ್ಷದ ಶಿವೋಹಂ ಅನಂತ್ ತಿವಾರಿ ಮೃತ ವಿದ್ಯಾರ್ಥಿ.

Home add -Advt

ಮಣಿಪಾಲ್ ನ ಎಂ.ಐ.ಟಿಯಲ್ಲಿ ಬಿ.ಟೆಕ್ ಎರಡನೇ ಸೆಮಿಸ್ಟರ್ ಓದುತ್ತಿದ್ದ. ಮಣಿಪಾಲ್ ನ ಬಿಟೆಕ್ ಹಾಗೂ ಜರ್ನಲಿಸಂ ವಿಭಾಗದ ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗಿದ್ದರು. ಹೊನ್ನಾವರ ಹಾಗೂ ಶಿರಸಿ ಮತ್ತಿಘಟ್ಟ ಭಾಗಕ್ಕೆ ತೆರಳಿದ್ದರು. ಕೆಲ ವಿದ್ಯಾರ್ಥಿಗಳು ಅಲ್ಲಿನ ಫಾಲ್ಸ್ ಗೆ ಹೋಗಿದ್ದಾಗ ಫಾಲ್ಸ್ ನೀರಿಗೆ ಇಳಿದಿದ್ದಾರೆ. ಈ ವೇಳೆ ವಿದ್ಯಾರ್ಥಿ ಶಿವೋಹಂ ಜಲಪಾತದ ನೀರಿನಲ್ಲಿ ಈಜಲು ಹೋಗಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button