Belagavi NewsBelgaum NewsKarnataka NewsLatest

*ಬಸ್ತವಾಡ ಅಲ್ಪಸಂಖ್ಯಾತರ ಕಾಲೋನಿಗೆ ₹2.51 ಕೋಟಿ: ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬಸ್ತವಾಡ ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಯ ಮೂಲಸೌಕರ್ಯ ಅಭಿವೃದ್ಧಿಗೆ ₹2.51 ಕೋಟಿ ಅನುದಾನ ಮಂಜೂರಾಗಿದ್ದು, ಈ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಸ್ಥಳೀಯ ಮುಖಂಡರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.


ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ಅನುದಾನ ಮಂಜೂರಾಗಿದ್ದು, ಕಾಲೋನಿಯ ರಸ್ತೆ ಹಾಗೂ ಚರಂಡಿ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ನಿವಾಸಿಗಳ ದೈನಂದಿನ ಸಂಚಾರ ಮತ್ತು ನೈರ್ಮಲ್ಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.


ಕಾಮಗಾರಿ ಪೂರ್ಣಗೊಂಡ ಬಳಿಕ ಮಳೆಗಾಲದಲ್ಲಿ ಎದುರಾಗುವ ರಸ್ತೆ ಸಮಸ್ಯೆ, ನೀರು ನಿಲ್ಲುವಿಕೆ ಹಾಗೂ ಸಂಚಾರದ ಅಡಚಣೆಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಚರಂಡಿ ವ್ಯವಸ್ಥೆಯಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗಲಿದ್ದು, ಪ್ರದೇಶದ ಸ್ವಚ್ಛತೆ ಮತ್ತು ನೈರ್ಮಲ್ಯವೂ ಸುಧಾರಿಸಲಿದೆ.


ಗ್ರಾಮದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಹಾಗೂ ನಿಗದಿತ ಮಾನದಂಡಗಳಂತೆ ಕೈಗೊಳ್ಳುವಂತೆ ಸ್ಥಳೀಯ ಮುಖಂಡರು ಸೂಚಿಸಿದರು.


ಭೂಮಿಪೂಜೆ ಕಾರ್ಯಕ್ರಮದಲ್ಲಿ ರಾಜು ಬಡವಣ್ಣವರ, ಮಾಣಿಕ್ ಸಂಕೇಶ್ವರಿ, ಭರತೇಶ ಸಂಕೇಶ್ವರಿ, ಮನೋಹರ ಬಾಂಡಗಿ, ವಿಠ್ಠಲ ಪಾಟೀಲ, ಈರಪ್ಪ ಚೌಗುಲೆ, ರವಿ ಕುಡಚಿ, ಚಂದ್ರಕಾಂತ ಪಾಟೀಲ, ಶಿವಾಜಿ ಕಾಕತ್ಕರ್, ರಾಮಾ ಕಾಕತ್ಕರ್, ಅಜಿತ ಭಾಗಣ್ಣವರ, ಸಂಜು ಬಡಚಿ, ಮಹಾವೀರ ಸಂಕೇಶ್ವರ, ಪದ್ಮರಾಜ ಪಾಟೀಲ, ಭರಮಪ್ಪ ಗೌಡಕೆಂಚಕ್ಕಗೋಳ, ಅಶೋಕ ಜಕ್ಕಣ್ಣವರ, ಮನೋಹರ್ ಮುಚ್ಚಂಡಿ ಸೇರಿದಂತೆ ಬ್ರಹ್ಮದೇವ ಯುವಕ ಮಂಡಳದ ಪದಾಧಿಕಾರಿಗಳು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button