Latest

ಗೀಸರ್ ನಿಂದ ವಿಷಾನೀಲ ಸೋರಿಕೆ; ಸ್ನಾನಕ್ಕೆ ಹೋಗಿದ್ದ ವಿದ್ಯಾರ್ಥಿನಿ ದಾರುಣ ಸಾವು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗೀಸರ್ ನಿಂದ ವಿಷಾನಿಲ ಸೋರಿಕೆಯಾದ ಪರಿಣಾಮ ಸ್ನಾನಕ್ಕೆಂದು ಬಾತ್ ರೂಂ ಗೆ ಹೋಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.

24 ವರ್ಷದ ಸಂಪದ ಮೃತ ಯುವತಿ. ಎಂಬಿಬಿಎಸ್ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದ ಸಂಪದ ಆಸ್ಪತ್ರೆಯೊಂದರಲ್ಲಿ ಟ್ರೈನಿ ವೈದ್ಯೆಯಾಗಿಯೂ ಕೆಲಸಮಾಡುತ್ತಿದ್ದಳು. ಕರ್ತವ್ಯ ಮುಗಿಸಿ ಅಪಾರ್ಟ್ ಮೆಂಟ್ ನಲ್ಲಿರುವ ಮನೆಗೆ ಬಂದ ಸಂಪದ ಪ್ರೆಶ್ ಆಗಲು ಸ್ನಾನಕ್ಕೆ ಹೋಗಿದ್ದಾಳೆ.

Home add -Advt

ಎಷ್ಟು ಹೊತ್ತಾದರೂ ಬಾತ್ ರೂಂ ನಿಂದ ಮಗಳು ಹೊರಗೆ ಬಾರದಿದ್ದಾಗ ತಾಯಿ ಮಗಳನ್ನು ಕೂಗಿದ್ದಾಳೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಕ್ಷಣ ಮಗನಿಗೆ ತಿಳಿಸಿ, ಇಬ್ಬರೂ ಬಾತ್ ರೂಂ ಬಾಗಿಲನ್ನು ಒಡೆದು ನೋಡಿದ್ದಾರೆ. ಮಗಳು ಬಾತ್ ರೂಂ ನಲ್ಲಿಯೇ ಕುಸಿದು ಬಿದ್ದಿದ್ದಾಳೆ. ತಕ್ಷಣ ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಕೋನರೆಡ್ದಿ ರಾಜೀನಾಮೆ

Related Articles

Back to top button