Kannada NewsKarnataka NewsLatest

ಮೆಡಿಕಲ್ ಬಿಲ್ ವಿಳಂಬ: ನೌಕರರ ಸಂಘ ಆಕ್ಷೇಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಮೆಡಿಕಲ್ ಬಿಲ್ ಪರಿಶೀಲನಾ ಕಮೀಟಿ ನೇಮಕವಾದಾಗಿನಿಂದ ಜಿಲ್ಲಾ ಪಂಚಾಯತಿಯಲ್ಲಿ ಮೆಡಿಕಲ್ ಬಿಲ್ಲುಗಳು ಕಳೆದ 8 ತಿಂಗಳಿಂದ ಸಕಾಲಕ್ಕೆ ಬಟವಡೆ ಆಗದೇ ನೌಕರರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು  ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳಗಾವಿ ಜಿಲ್ಲಾ ಘಟಕ ಆಕ್ಷೇಪಿಸಿದೆ.

ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿ, ಈ ಕಮೀಟಿಯನ್ನೇ ರದ್ದುಮಾಡಿ ಮೊದಲಿನಂತೆ ಸರಳೀಕರಣದೊಂದಿಗೆ ಆದಷ್ಟು ಬೇಗ ಮೆಡಿಕಲ್ ಬಿಲ್ ಗಳು ಇತ್ಯರ್ಥ ಆಗುವಂತೆ ಕ್ರಮಕೈಗೊಳ್ಳಬೇಕೆಂದು ವಿನಂತಿಸಲಾಗಿದೆ.

ನೌಕರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳೂ ಆದ ಜಗದೀಶಗೌಡ ಪಾಟೀಲರ  ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ನೌಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯೂ ಆದ  ಜಯಕುಮಾರ ಹೆಬಳಿ, ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಶಂಕರ ಗೋಕಾವಿ, ಜಿಲ್ಲಾ ಖಜಾಂಚಿ ಶ್ರವಣ ರಾನವ್ವಗೋಳ, ಜಿಲ್ಲಾ ಕಾರ್ಯದರ್ಶಿ ಚಂದ್ರು ಕೋಲಕಾರ ಉಪಸ್ಥಿತರಿದ್ದರು.

ಕೂಡಲೇ ಸ್ಪಂದಿಸಿದ ಸಿಇಒ ಡಿಎಚ್ಒ ಜೊತೆ ಚರ್ಚಿಸಿ ಶೀಘ್ರವೇ ಬಿಲ್ಲುಗಳನ್ನು ಇತ್ಯರ್ಥಪಡಿಸಲಾಗುವುದು ಹಾಗೂ ಕಮೀಟಿ ರದ್ದತಿ ಬಗ್ಗೆ ಕ್ರಮವಹಿಸುವುದಾಗಿ ತಿಳಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button