
ನೇಗಿನಹಾಳ ವೈದ್ಯಾಧಿಕಾರಿ ಡಾ. ಸಂತೋಷ ಹಸರಗುಂಡಗಿ ಹೆಚ್ಚಿನ ಕಲಿಕೆ (ಪಿ.ಜಿ)ಗಾಗಿ ಬಿಳ್ಕೊಡುಗೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ನೇಗಿನಹಾಳ : ಹತ್ತಾರು ಹಳ್ಳಿಯ ಜನಸಾಮಾನ್ಯರ ಜೀವನಾಡಿಯಾಗಿದ್ದ ನೇಗಿನಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಸಂತೋಪ ಹಸರಗುಂಡಗಿ ಕೇವಲ ನೇಗಿನಹಾಳ ಮಾತ್ರವಲ್ಲದೇ ಮುಂತಾದ ಗ್ರಾಮಗಳಿಂದ ತಮ್ಮ ಅನಾರೋಗ್ಯವನ್ನು ಪರಿಹರಿಸಿಕೊಳ್ಳಲು ಬರುತ್ತಿದ್ದ ಪ್ರತಿನಿತ್ಯ ನೂರಾರು ಜನರಿಗೆ ಅತ್ಯಂತ ಕಾಳಜಿಯಿಂದ ಅವರ ರೋಗವನ್ನು ಗುಣಪಡಿಸುತ್ತಿದ್ದರು ಇತಂಹ ವ್ಯಕ್ತಿಗಳು ತುಂಬಾ ವಿರಳ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಎಸ್. ಎಸ್ ಸಿದ್ದನ್ನವರ ಹೇಳಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂತೋಷ ಹಸರಗುಂಡಗಿ ಇವರ ಉನ್ನತ ಶಿಕ್ಷಣ(ಪಿ.ಜಿ) ಕಲಿಯುವ ಅವಕಾಶ ಪಡೆದಿದ್ದರಿಂದ ಆಸ್ಪತ್ರೆ ತೊರೆದಿದ್ದು ಅದರ ಬಿಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಲ್ಲಿನ ಜನರಿಗೆ ಒಂದು ಕಡೆ ಸಂತೋಷವಾದರೆ ಮತ್ತೊಂದು ಕಡೆ ಅತ್ಯಂತ ಬೇಸರವನ್ನುಂಟು ಮಾಡಿದೆ.
ಇವರು ಸುತ್ತಮೂತ್ತಲಿನ ಕೆಸರಕೊಪ್ಪ, ಯರಡಾಲ, ಕುರಗುಂದ, ಹೊಳಿಹೊಸುರ, ಸಂಪಗಾವಿ, ಪಟ್ಟಿಹಾಳ, ಭಾಂವಿಹಾಳ, ಯರಗೊಪ್ಪ, ಕಲ್ಲೂರ ಗ್ರಾಮಗಳ ಜನರೊಂದಿಗೆ ಅತ್ಯಂತ ಅನ್ಯೂನ್ಯ ಸಂಬಂಧ ಬೆಳೆಸಿಕೊಂಡಿದ್ದರು. ಗ್ರಾಮದ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಸೋರಗುವ ಸ್ಥಿತಿಯಲ್ಲಿದ್ದಾಗ ಅಧಿಕಾರಯಾಗಿ ಕೋಟ್ಯಾಂತರ ರೂಗಳಲ್ಲಿ ನೂತನ ಆಸ್ಪತ್ರೆ ನಿರ್ಮಿಸಿ ಅಭಿವೃದ್ಧಿಪಡಿಸಿ ಆಸ್ಪತ್ರೆಯನ್ನು ಮೆಲ್ದರ್ಜೆಗೆರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದರು.
ತಾಲೂಕಾ ಹಾಗೂ ಗ್ರಾಮದ ಜನತೆ ಸತ್ಕರಿಸಿ ಬಿಳ್ಕೊಟ್ಟರು. ತಾಲೂಕಾ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಸ್.ವಿ ಹೋಮಕರ, ನಾಗರಾಜ ಖಾಡೆ, ಪಿ.ಆರ್ ಮಸ್ಕರನೀಸ್, ಮಹಾದೇವ ಕುಂದರಗಿ, ಶಿವರಂಜನ ಮಡಿವಾಳರ, ನಾಗರಾಜ ಬಡಿಗೇರ, ಸಂಜು ಕಾರಗಿ, ಭೀರಪ್ಪ ಕೊಳವಿ, ಬಸವರಾಜ ಕೆರೂರ, ಹಾಗೂ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಮಹಿಳಾ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಮತ್ತಿತ್ತರ ನೂರಾರು ಜನರು ಉಪಸ್ಥಿತರಿದ್ದರು. ಜಿ.ಆಯ್ ಕಲ್ಲೊಳ್ಳಿ ಸ್ವಾಗತಿಸಿದರು, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್ ಮುತ್ನಾಳ ನಿರೂಪಿಸಿದರು. ಆಶಾ ಗುರುಪುತ್ರ ವಂದಿಸಿದರು.///