ಪ್ರಗತಿವಾಹಿನಿ ಸುದ್ದಿ: ಭಾರಿ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದಾಗಿ 7 ಜನರು ಜೀವಂತ ಸಮಾಧಿಯಾಗಿರುವ ಘಟನೆ ಮೆಘಾಲಯದಲ್ಲಿ ನಡೆದಿದೆ. ಹಲವರು ಕಣ್ಮರೆಯಾಗಿದ್ದಾರೆ.
ಮೆಘಾಲಯದ ದಕ್ಷಿಣ ಗಾರೋ ಹಿಲ್ಸ್ ಪ್ರದೇಶದಲ್ಲಿಹಠಾತ್ ಪ್ರವಾಹ ಮತ್ತೊಂದೆಡೆ ಭೂ ಕುಸಿತ ಸಂಭವಿಸಿದ್ದು, 7 ಜನರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಹಲವರು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಇನ್ನೊಂದೆಡೆ ಪ್ರವಾಹ ಹಾಗೂ ಭೂ ಕುಸಿತದಲ್ಲಿ ಹತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸುವಂತೆ ಸಿಎಂ ಕಾನ್ರಾಡ್ ಸಂಗ್ಮಾ ಸೂಚಿಸಿದ್ದಾರೆ. ತುರ್ತು ಪರಿಶೀಲನಾ ಸಭೆ ನಡೆಸಿದ್ದಾರೆ.
ಹಠಾತ್ ಪ್ರವಹಾ ಭೂ ಕುಸಿತ ಮೆಘಾಲಯದ 5 ಜಿಲ್ಲೆಗಳಲ್ಲಿ ಪ್ರಮುಖವಾಗಿ ದಕ್ಷಿಣ ಹಾಗೂ ಪಶ್ಚಿಮ ಗಾರೋ ಬೆಟ್ಟಗಳ ಮೇಲೆ ತೀವ್ರ ಪ್ರಭಾವ ಬೀರಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ