Latest

ನಟಿ ಮೇಘನಾ ಹಾಗೂ ಮಗುವಿಗೂ ಕೋವಿಡ್ ದೃಢ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಟಿ ಮೇಘನಾ ರಾಜ್ ತಂದೆ-ತಾಯಿಗೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಇದೀಗ ಮೇಘನಾ ಹಾಗೂ ಪುಟ್ಟ ಮಗುವಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮೇಘನಾ ಹಾಗೂ ಪುಟ್ಟ ಮಗು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಯಾರ ಸಂಪರ್ಕ ಹೊಂದದಿದ್ದರೂ ಕೊರೊನಾ ಹೇಗೆ ಬಂತು ಗೊತ್ತಾಗುತ್ತಿಲ್ಲ. ತಮ್ಮ ಸಂಪರ್ಕದಲ್ಲಿದ್ದವರು ಎಚ್ಚರಿಕೆಯಿಂದಿರಿ ಎಂದು ಸುಂದರ್ ರಾಜ್‍ ಮನವಿ ಮಾಡಿಕೊಂಡಿದ್ದಾರೆ.

Home add -Advt

ಕೊರೊನಾ ಸೋಂಕಿನಿಂದಾಗಿ ಮೇಘನಾ ತಾಯಿ ಪ್ರಮಿಳಾ ಜೋಷಾಯಿ ಜಯನಗರದ ಎಕ್ಸೆಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮೇಘನಾ ತಂದೆ ಸುಂದರ್ ರಾಜ್ ಗೂ ಕೋವಿಡ್ ತಗುಲಿದೆ ಅಲ್ಲದೇ ಮೇಘನಾ ಹಾಗೂ ಮಗುವಿಗೂ ಸೋಂಕು ತಗುಲಿದೆ.

Related Articles

Back to top button