ಕಲೆ ಮತ್ತು ವಾಸ್ತುಶಿಲ್ಪದಿಂದ ಇತಿಹಾಸವನ್ನು ಶ್ರೀಮಂತಗೊಳಿಸಿದ ಅಮರ ಶಿಲ್ಪಿ ಜಕಣಾಚಾರಿ

ಡಾ.ನಿರ್ಮಲಾ ಬಟ್ಟಲ
ಕರ್ನಾಟಕ ರಾಜ್ಯ ಸರ್ಕಾರವು ಇದೆ ಮೊದಲಬಾರಿಗೆ ವಿಶ್ವ ಕರ್ಮ ಸಮುದಾಯದ ಐತಿಹಾಸಿಕ ಪುರುಷ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು ಆಚರಿಸುತ್ತಿದೆ.
ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ಶಿಲ್ಪಗಳ ಕೊಡುಗೆ ಅಪಾರ ವಾದುದು. ಅಂತಹ ಅಪರೂಪದ ಕೊಡುಗೆ ಯನ್ನು ನಾಡಿಗೆ ನೀಡಿ ತನ್ನ ಕಲಾ ಕೌಶಲ್ಯ ಕೊಡುಗೆಯನ್ನು ನಾಡಿಗೆ ನೀಡಿ ಅಜರಾಮರನಾದವನು ಅಮರಶಿಲ್ಪಿ ಜಕಣಾಚಾರಿ.
ಜಕಣಾಚಾರಿ ಹುಟ್ಟಿದ್ದು ತುಮಕೂರಿನ ಕ್ರೀಡಾ ಪುರ ಎಂಬ ಹಳ್ಳಿಯಲ್ಲಿ . ಸೌಂದರ್ಯ ಮತ್ತು ಕಲಾ ಆರಾಧಕನಾಗಿದ್ದ ಜಕಣಾಚಾರಿ ವೈಯಕ್ತಿಕ ಬದುಕಿನಲ್ಲಿ ನಡೆದ ಘಟನೆಗಳಿಂದ ಬೇಸತ್ತು ಹೆಂಡತಿ ಮನೆ, ಊರನ್ನು ತೊರೆದು ಲೋಕಸಂಚಾರಿಯಾಗಿ ಅಲೆಯುತ್ತಿರುವಾಗ ರಾಮಾನುಜಾಚಾರ್ಯರು ಮಾರ್ಗದರ್ಶನ ದಿಂದ ತನ್ನ ವೃತ್ತಿಯಲ್ಲಿ ಏಕಾಗ್ರತೆನ್ನು ಸಾಧಿಸಿದ. ಹೊಯ್ಸಳ ಅರಸ ವಿಷ್ಣುವರ್ಧನ ಮತ್ತು ರಾಣಿ ಶಕುಂತಲಾ ದೇವಿಯರ ಆಶಯದಂತೆ ಬೇಲೂರು ಚನ್ನಕೇಶವ ದೇವಾಲಯದ ನಿರ್ಮಾಣ ಜವಾಬ್ದಾರಿಯನ್ನು ವಹಿಸಿಕೊಂಡ. ಅದು ದೇವಾಲಯವಾಗದೆ ಅಪರೂಪದ ಕಲಾಕೃತಿಯಾಗಿ ನಿರ್ಮಿಸಿಲು ತನ್ನ ಜೀವನವನ್ನೇ ಮುಡುಪಾಗಿಟ್ಟ. ಶಿಲೆಯನ್ನು ಕಲೆಯಾಗಿ ಅರಳಿಸಿದ. ಪುರಾಣ ಮಹಾಕಾವ್ಯಗಳು ಕಲ್ಲಿನಲ್ಲಿ ಜೀವಂತವಾದವು. ಅತ್ಯಂತ ಸೂಕ್ಷ್ಮ ಕುಸರಿ ಕೆತ್ತನೆಯು ಕವಿಗಳಿಗೆ ಕಲೆಯ ಬಲೆಯಾಗಿ ಕಂಡರೆ ಇತಿಹಾಸಕಾರನಿಗೆ ಆಕರವಾಗಿ ಕಂಡಿತು. ಸೌಂದರ್ಯೋಪಾಸಕನಿಗೆ ವಿಸ್ಮಯವಾಗಿ ಕಂಡಿತು. ತಂತ್ರಜ್ಞನಿಗೆ ಸವಾಲಾಗಿ ಕಂಡಿತು.
ಜಕಣಾಚಾರಿ ನಿರ್ಮಿಸಿದ ಚನ್ನಕೇಶವ ಮೂರ್ತಿಯಲಿ ದೋಷವಿದೆ ಎನ್ನುವ ಡಂಕಣಾಚಾರಿಯ ಮಾತಿಗೆ ಬೇಸರಗೊಂಡು, ಮೂರ್ತಿಯಲ್ಲಿ ದೋಷಕಂಡುಬಂದರೆ ತನ್ನ ಕೈ ಕತ್ತರಿಸಿಕೊಳ್ಳುವ ಸಾವಾಲು ಹಾಕಿದನು. ಅದರಂತೆ ಪರೀಕ್ಷಿಸಿದಾಗ ಕೇಶವಮೂರ್ತಿ ಹೊಟ್ಟೆಯ ಭಾಗದಲ್ಲಿ ಕಪ್ಪೆ ಕಂಡುಬಂದು , ಮಾತಿನಂತೆ ಕೈ ಕತ್ತರಿಸಿಕೊಂಡನು. ದೋಷವನ್ನು ತೋರಿದ ಡಂಕಣ ಜಕಣಾಚಾರಿ ಮಗನೆ ಆಗಿದ್ದ. ತಂದೆಯನ್ನು ಮಿರಿಸಿದ ಮಗನಾದನು. ಮುಂದೆ ದೇವರ ಅಣತಿಯಂತೆ ಜಕಣಾಚಾರಿಯು ತನ್ನ ಹುಟ್ಟುರಾದ ಕ್ರೀಡಾ ಪುರದಲ್ಲಿ  ಚೆನ್ನಕೇಶವ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ. ದೇವರ ಅನುಗ್ರಹದಿಂದ ಮರಳಿ ಕೈಗಳನ್ನು ಪಡೆದನೆಂದು, ಅದಕ್ಕಾಗಿ ಆ ಊರಿಗೆ ಕೈದಾಳವೆಂದು ಹೆಸರು ಬಂದಿದೆ ಎಂಬ ಪ್ರತೀತಿ ಇದೆ.
ಕರ್ನಾಟಕ ಇತಿಹಾಸವನ್ನು  ಕಲೆ ಮತ್ತ ವಾಸ್ತುಶಿಲ್ಪದಿಂದ ಶ್ರೀಮಂತಗೊಳಿಸಿದ ಇಂತಹ ಮಹಾನ್ ಶಿಲ್ಪ ಯನ್ನು ಸ್ಮರಿಸುವ ಮೂಲಕ ಇತಿಹಾಸದ ಎಲ್ಲಾ ಶಿಲ್ಪಕಾರರಿಗೂ ಗೌರವಿಸುತ್ತಿದೆ.
ಕರ್ನಾಟಕ ಸರಕಾರವು 1995 ರಿಂದ ಶಿಲ್ಪ ಕಲೆಯಲ್ಲಿ ಸಾಧನೆ ಮಾಡಿದ ಶಿಲ್ಪಗಳನ್ನು ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಯನ್ನು ನೀಡಿ ಗೌರವಿಸುತ್ತದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button