Belagavi NewsBelgaum NewsKannada NewsKarnataka News

ಜಿಆಯ್ ಟಿಯಲ್ಲಿ ಋತುಚಕ್ರದ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ  ಸಂವಾದ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಮ್ಸ್  ಬೆಳಗಾವಿಯ ವೈದ್ಯಾಧಿಕಾರಿ ಡಾ. ಅರ್ಪಿತಾ ಅವರು ಕೆಎಲ್ ಎಸ್ ಸಂಸ್ಥೆಯ ಜಿಐಟಿಯಲ್ಲಿ “ಋತು ಚಕ್ರದ ಆರೋಗ್ಯ ಮತ್ತು ನೈರ್ಮಲ್ಯ” ಕುರಿತು ಹೆಣ್ಣುಮಕ್ಕಳಿಗೆ ವಿಶೇಷ ಮಾಹಿತಿಯನ್ನು  ಒದಗಿಸಿ ಅವರ ಹಲವು  ಅನುಮಾನಗಳನ್ನ ಚರ್ಚೆ  ಮಾಡಿ ಸೂಕ್ತ ಸಲಹೆ ಸೂಚನೆಗಳನ್ನು  ನೀಡಿದರು.

100 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು  ವಿವಿಧ ಪೋಸ್ಟರ್  ತಯಾರಿಸಿ  ಜಾಗೃತಿ  ಮೂಡಿಸಿದರು. ಪ್ರೊ. ಗೀತಾ  ಸಾಂಬ್ರೇಕರ್  ಮತ್ತು  ಡಾ. ಜ್ಯೋತಿ  ಜಮ್ನಾನಿ  ಪೋಸ್ಟರ್ ತಯಾರಿಕೆಗೆ  ಸಹಾಯ  ಮಾಡಿದರು.

ಕಾರ್ಯಕ್ರಮವನ್ನು ಪ್ರೊ. ವಿ.ವಿ. ರಜಪೂತ್ , ಎನ್‌ಎಸ್‌ಎಸ್  ಮತ್ತು ಐಆರ್‌ಸಿಎಸ್  ಅಧಿಕಾರಿ, ಡಾ. ಅನುಪಮಾ  ಕಲ್ಲೋಳ್ , ಐಎಸ್‌ಟಿಇ  ವಿದ್ಯಾರ್ಥಿ  ವಿಭಾಗ  ಕಾರ್ಯದರ್ಶಿ  ಮತ್ತು  ಖಜಾಂಚಿ   ಕಾರ್ಯಕ್ರಮಕ್ಕೆ  ಸಹಕಾರ ನೀಡಿದರು . ಡಾ. ಸ್ಮಿತಾ ಕಬ್ಬೂರ್, ಡಾ. ಶಾರದಾ ಕೋರಿ  ಮತ್ತು ಡಾ. ಜ್ಯೋತಿ ಜಮ್ನಾನಿ ಕಾರ್ಯಕ್ರಮ ಸಂಯೋಜಿಸಿದರು.

Home add -Advt

ಈ ವಿಶೇಷ ಜಾಗೃತಿ  ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ  ಕೆ ಎಲ್ ಎಸ್   ಆಡಳಿತ ಮಂಡಳಿ  ಹಾಗೂ ಪ್ರಾಂಶುಪಾಲರು  ಶ್ಲಾಘಿಸಿದರು.

ಈ ಜಾಗೃತಿ ಸಂವಾದದಲ್ಲಿ  ಕೆಎಲ್‌ಎಸ್ ಜಿಐಟಿಯ  ಎನ್‌ಎಸ್‌ಎಸ್, ರೆಡ್ ಕ್ರಾಸ್‌ನ  ಬಾಲಕಿಯರು,  ಸ್ವಯಂಸೇವಕರು  ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button