ಮಾನಸಿಕ ಆರೋಗ್ಯ ಮತ್ತು ರಾಜಯೋಗ

ವಿಶ್ವಾಸ ಸೋಹೋನಿ
ವಿಶ್ವದಲ್ಲಿ ಅತಿಪ್ರಿಯವಾದ ವ್ಯಕ್ತಿಯ ಆಕಸ್ಮಿಕ ಸಾವು ಅತಿಯಾದ ದು:ಖಕ್ಕೆ ಕಾರಣವಾಗಿದೆ. ಆದರೆ ಇದಕ್ಕಿಂತ ಹೆಚ್ಚಿನ ದು:ಖ ಪರಿವಾರದ ವ್ಯಕ್ತಿಯ ಮಾನಸಿಕ ಅಸ್ವಸ್ಥತೆಯಿಂದ ಉಂಟಾಗುತ್ತದೆ. ಮಾನಸಿಕವಾಗಿ ಅಸ್ವಸ್ಥವಾಗಿರುವವರಿಗೆ ಮಾನಸಿಕ ರೋಗಿ, ಹುಚ್ಚ, ಬುದ್ಧಿಮಾಂದ್ಯ ಎಂದು ಕರೆಯುತ್ತಾರೆ.
ಒಬ್ಬ ವ್ಯಕ್ತಿಯ ಸಾವಿನಿಂದ ಆಗಿರುವ ದು:ಖ ಸಮಯ ಕಳೆದಂತೆ ಕಡಿಮೆಯಾಗುತ್ತದೆ, ಆದರೆ ಪರಿವಾರದ ವ್ಯಕ್ತಿ ಮಾನಸಿಕ ರೋಗಿಯಾದರೆ, ಆ ಮನೆಯ ಸಂತೋಷವು ಮಾಯವಾಗಿ ಎಲ್ಲರ ಮನಸ್ಸಿನಲ್ಲಿ ಭಯ ಮತ್ತು ಚಿಂತೆ ಸದಾಕಾಲಕ್ಕೂ ಮನೆಮಾಡುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ(W.H.O.) ಪ್ರಕಾರ ವಿಶ್ವದಾದ್ಯಂತ ೪೫೦ ಮಿಲಿಯನ್ ಜನರು ಮಾನಸಿಕ ಕಾಯಿಲೆಗೆ ತುತ್ತಾಗಿದ್ದಾರೆ. ಭಾರತದಲ್ಲಿ ೧೫ ಲಕ್ಷ ಜನ ಮಾನಸಿಕ ರೋಗಿಗಳಿದ್ದಾರೆ. ಮನೋವಿಜ್ಞಾನಿಗಳ ಪ್ರಕಾರ ತಲೆಗೆ ಗಂಭೀರವಾಗಿ ಗಾಯವಾದರೆ, ಮೆದಳು ಜ್ವರ, ಮೆದುಳು ಹುಣ್ಣು (ಬ್ರೈನ್ ಟ್ಯೂಮರ್), ಅತಿಯಾದ ವಿಲಾಸಿ ಜೀವನ, ಮನಸ್ಸಿನ ಮೇಲೆ ಕೆಲಸದ ಒತ್ತಡ, ಮುರಿದ ಸಂಬಂಧಗಳು, ನಿರುದ್ಯೋಗ ಸಮಸ್ಯೆ, ಅತಿಯಾದ ಯೋಚನೆ ಮುಂತಾದವುಗಳು ಮಾನಸಿಕ ರೋಗಕ್ಕೆ ಕಾರಣವಾಗಿವೆ.
ಈ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ವಿಜ್ಞಾನವು ಅನೇಕ ಚಿಕಿತ್ಸಾ ಪದ್ಧತಿ ಮತ್ತು ಔಷಧಗಳನ್ನು ಕಂಡು ಹಿಡಿದಿದೆ. ಇದರಿಂದ ಅನೇಕರು ಸಂಪೂರ್ಣ ರೀತಿಯಲ್ಲಿ ಗುಣಮುಖರಾಗುತ್ತಿದ್ದಾರೆ. ಆದರೆ ಅನೇಕ ಜನರು ಚಿಕಿತ್ಸೆ ಪಡೆದರೂ ರೋಗಮುಕ್ತರಾಗುತ್ತಿಲ್ಲ.
ಆತ್ಮ ಅಮರ ಮತ್ತು ಅವಿನಾಶಿಯಾಗಿದೆ. ಪಂಚತತ್ವಗಳ ಶರೀರದಿಂದ ಕರ್ಮಗಳನ್ನು ಮಾಡುತ್ತದೆ. ಕರ್ಮಫಲವನ್ನು ಭೋಗಿಸಿದ ನಂತರ ಒಂದು ಶರೀರವನ್ನು ತ್ವಜಿಸಿ ಇನ್ನೊಂದು ಶರೀರದಲ್ಲಿ ಹೋದಾಗ ಕರ್ಮಗಳು ಸಂಸ್ಕಾರದ ರೂಪದಲ್ಲಿ ಮತ್ತೆ ಪ್ರಕಟವಾಗುತ್ತವೆ. ಆದ್ದರಿಂದ ’ಮಾಡಿದ್ದುಣ್ಣೋ ಮಹಾರಾಯ’ ಎಂಬ ಗಾದೆ ಮಾತಿದೆ. ಮಾನವನು ವಿಕಾರಗಳ ಅಥವಾ ಪರಿಸ್ಥಿತಿಗೆ ವಶನಾಗಿ ಕರ್ಮಗಳನ್ನು ಮಾಡುವಾಗ ಅದರ ಕರ್ಮಭೋಗದ ಬಗ್ಗೆ ಯೋಚನೆ ಮಾಡುವುದಿಲ್ಲ. ಕೆಲವೊಮ್ಮೆ ಅನೇಕ ಪ್ರಕಾರದ ಉಪಾಯಗಳನ್ನು ಮಾಡಿದರೂ ಕಾಯಿಲೆ ವಾಸಿಯಾಗುವುದಿಲ್ಲ. ಕರ್ಮಸಿದ್ಧಾಂತದ ಪ್ರಕಾರ ಅತಿ ಪಾಪಕರ್ಮಗ ಕಾರಣದಿಂದ ನಿದ್ರಾಹೀನತೆ, ಆಶಾಂತಿ, ಮಾನಸಿಕ ಒತ್ತಡವುಂಟಾಗುತ್ತದೆ. ಮನೋವ್ಯಾಧಿಯ ನಕಾರಾತ್ಮಕ ಶಕ್ತಿಯಿಂದ ಪಾರಾಗಲು ಮನುಷ್ಯನು ಮನೋಚಿಕಿತ್ಸಕರ ಮತ್ತು ಮಾನಸಿಕ ಆಸ್ಪತ್ರೆಗಳ ಸಹಾಯ ಪಡೆಯುತ್ತಾನೆ.
ಮನೋವಿಜ್ಞಾನಿಗಳ ಪ್ರಕಾರ ಮೆದುಳಿನಲ್ಲಿರುವ ಸೆರೊಟೊನಿನ್ ಮತ್ತು ನ್ಯೂರೋಫ್ರಿನ್‌ನ ಪರಿವರ್ತನೆಯಿಂದ ವ್ಯಕ್ತಿಯ ಹುಚ್ಚು ಜಾಸ್ತಿಯಾಗುತ್ತದೆ. ಔಷಧಗಳ ಸಹಾಯದಿಂದ ಇದರ ಮೇಲೆ ಅಲ್ಪಪ್ರಮಾಣದಲ್ಲಿ ನಿಯಂತ್ರಣ ಪಡೆಯಬಹುದು. ವೈದ್ಯರು ಶಾರೀರಿಕ ಕಾಯಿಲೆಯನ್ನು ಸರಿಪಡಿಸಬಹುದು, ಆದರೆ ಮಾನಸಿಕ ಕಾಯಿಲೆಗಳನ್ನು ಗುಣಪಡಿಸುವುದು ಬಹಳ ಕಷ್ಟ.
ಮನೋವಿಜ್ಞಾನಿಗಳ ಪ್ರಕಾರ ಮಾನವನ ಮೆದುಳಿನಲ್ಲಿರುವ ಅನೇಕ ಚಿಕ್ಕ ನ್ಯೂರೋ ಟ್ರಾನ್ಸ್‌ಮೀಟರ್‌ಗಳಿಂದ ಮಾಹಿತಿ ದೊರೆಯುತ್ತದೆ ಮತ್ತು ಭಾವನೆಗಳ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ. ಇದರ ಸಂಖ್ಯೆ ಕಡಿಮೆಯಾದಾಗ ಮನೋರೋಗಗಳು ಬರುತ್ತವೆ. ಆದರೆ ಸಂಖ್ಯೆ ಕಡಿಮೆಯಾಗುವ ಕಾರಣ ಯಾರಿಗೂ ಗೊತ್ತಿಲ್ಲ. ಆಧ್ಯಾತ್ಮಿಕ ವಿಜ್ಞಾನದ ಪ್ರಕಾರ ಇದಕ್ಕೆ ಕಾರಣವೇನೆಂದರೆ ನಮ್ಮ ಪೂರ್ವಜನ್ಮದ ಕರ್ಮದ ಫಲ. ಪ್ರತಿಯೊಬ್ಬರ ಕರ್ಮ ಮತ್ತು ಆಶೀರ್ವಾದದ ಲೆಕ್ಕ ವಿಭಿನ್ನವಾಗಿದೆ. ಕೆಲವರಿಗೆ ಸ್ವಲ್ಪ ಸಮಯದ ಚಿಕಿತ್ಸೆಯಿಂದ ಆರೋಗ್ಯವು ಸುಧಾರಣೆಯಾಗುತ್ತದೆ. ಇನ್ನೂ ಕೆಲವರಿಗೆ ದೀರ್ಘಕಾಲದ ಔಷಧೋಪಚಾರ ಬೇಕಾಗುತ್ತದೆ. ನದಿ-ನೀರಿನ ಸೆಳೆತದಿಂದ ವ್ಯಕ್ತಿಯು ತನ್ನ ರಕ್ಷಣೆಯನ್ನು ಮಾಡಿಕೊಳ್ಳಲು ಹೋರಾಡಬೇಕಾಗುತ್ತದೆ. ಆದರೆ ಶವ ನೀರಿನಲ್ಲಿ ತೇಲಾಡುತ್ತದೆ, ಏಕೆಂದರೆ ಅದು ತನ್ನ ಸರ್ವಸ್ವವನ್ನು ನದಿಯ ಆಲೆಗಳಿಗೆ ಸಮರ್ಪಣೆ ಮಾಡಿದೆ. ಇದೇ ರೀತಿ ನಾವು ಪರಿಸ್ಥಿತಿಗಳೊಂದಿಗೆ ಹೋರಾಡದೇ ನಮ್ಮನ್ನು ನಾವು ಸರ್ವಶಕ್ತಿವಂತ ಭಗವಂತನಿಗೆ ಸಮರ್ಪಣೆ ಮಾಡಿಕೊಂಡು ಅವನ ಪ್ರೀತಿಯ ಆಲೆಗಳಲ್ಲಿ ತೇಲಾಡುತ್ತಿದ್ದರೆ ಅನೇಕ ಪರಿಸ್ಥಿತಿಗಳಿಂದ ಸಹಜವಾಗಿ ಪಾರಾಗಬಹುದು.
ನಿರಾಕಾರ ಪರಮಪಿತ ಪರಮಾತ್ಮ ಶಿವನು ಕಲಿಸುವ ರಾಜಯೋಗದ ಅಭ್ಯಾಸದಿಂದ ಮನಸ್ಸು ಶಾಂತ ಮತ್ತು ಸಬಲವಾಗುತ್ತದೆ. ಇದು ಕರ್ಮೇಂದ್ರಿಯಗಳ ಮೇಲೆ ರಾಜನಾಗುವ ಯೋಗವಾಗಿದೆ. ಆತ್ಮ ಮತ್ತು ಪರಮಾತ್ಮನ ನಡುವೆ ಸರ್ವಪ್ರಕಾರದ ಸಂಬಂಧ ಬೆಸೆಯಲ್ಪಡುವುದೇ ಸಹಜ ರಾಜಯೋಗವಾಗಿದೆ. ಈ ಸಂಬಂಧಗಳಲ್ಲಿ ತಂದೆ, ಶಿಕ್ಷಕ, ಸದ್ಗುರುವಿನ ಸಂಬಂಧ ಅತಿ ಮುಖ್ಯವಾಗಿದೆ. ಆತ್ಮನಾಗಿ ಪರಮಾತ್ಮನ ಜೊತೆಗೆ ಮನನ, ಚಿಂತನೆ, ಮಿಲನ ಮಾಡಿದಾಗ ಯೋಗಿಯು ಮಾನಸಿಕವಾಗಿ ಸದೃಢನಾಗಿ ಮಗ್ನಾವಸ್ಥೆಗೆ ತಲುಪುತ್ತಾನೆ. ಹಾಗಾದರೆ ಬನ್ನಿ, ನಾವೆಲ್ಲರೂ ರಾಜಯೋಗವನ್ನು ಕಲಿತು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಸಂತೋಷದಿಂದ ಆಚರಿಸೋಣ.

ಲೇಖಕರು  -ವಿಶ್ವಾಸ ಸೋಹೋನಿ
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,
೯೪೮೩೯೩೭೧೦೬.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button