Kannada NewsKarnataka NewsLatest

*ಪತ್ನಿ ಕಿರುಕುಳ: ಆಡಿಯೋ ಮೆಸೇಜ್ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಮೆಟ್ರೋ ಎಂಜಿನಿಯರ್*

ಪ್ರಗತಿವಾಹಿನಿ ಸುದ್ದಿ; ತುಮಕೂರು: ಪತ್ನಿ ಕಿರುಕುಳಕ್ಕೆ ಬೇಸತ್ತ ಮೆಟ್ರೋ ಎಂಜಿನಿಯರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಮಂಜುನಾಥ್ ಮೃತ ಎಂಜಿನಿಯರ್. ಬೆಂಗಳೂರಿನ ಮೆಟ್ರೋದಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್, ಪತ್ನಿ ಕಾಟದಿಂದ ಬೇಸತ್ತು ಸಹೋದರನಿಗೆ ಆಡಿಯೋ ಮೆಸೇಜ್ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

9 ವರ್ಷಗಳ ಹಿಂದೆ ಮಂಜುನಾಥ್ ತುರುವೆಕೆರೆ ಮೂಲದ ಪ್ರಿಯಾಂಕಾ ಯಾನೆ ಪವಿತ್ರಾಳನ್ನು ವಿವಾಹವಾಗಿದ್ದರು. ಮದುವೆ ಬಳಿಕ ಪತ್ನಿ ಪವಿತ್ರಾ ಮಂಜುನಾಥ್ ನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರಂತೆ. ಪದೇ ಪದೇ ಹಿಯಾಳಿಸುತ್ತಿದ್ದಳಂತೆ ಇದರಿಂದ ನೊಂದ ಮಂಜುನಾಥ್ ಕೆ.ಬಿ.ಕ್ರಾಸ್ ನ ಕುದ್ರುಪಾಳ್ಯ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾವಿಗೂ ಮುನ್ನ ತನ್ನ ಅಣ್ಣನಿಗೆ ಆಡಿಯೋ ಮೆಸೇಜ್ ಕಳುಹಿಸಿದ್ದಾರೆ. ತನಗೆ ಆಕೆ ಜೊತೆ ಜೀವನ ನಡೆಸಲು ಸಾಧ್ಯವಿಲ್ಲ, ಆ ಮನೆಹಾಳಿಯಿಂದ ಸಾಯ್ತಾ ಇದ್ದೀನಿ. ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳೋಕೆ ಹೇಳು. ನಾವು ಕೂಲಿ ಮಾಡಿಕೊಂಡು ಜೀವನ ಮಾಡುವವರಂತೆ…ಹಳ್ಳಿಗೆ ಬರಲ್ಲ ಎಂದವಳನ್ನು ನನಗೆ ಯಾಕಪ್ಪ ಮದುವೆ ಮಾಡಿದ್ರು? ಮೈಸೂರಲ್ಲಿ ಯಾರನ್ನೋ ನೋಡಿದ್ಲಂತೆ ಅವ್ರನ್ನೇ ಆಗ್ಬೇಕಿತ್ತಂತೆ… ಪೊಲೀಸ್ ಗೆ ಹೇಳ್ಬೇಡಿ ಪೋಸ್ಟ್ ಮಾರ್ಟಮ್ ಮಾಡ್ಬಿಡ್ತಾರೆ ಎಂದು ತಿಳಿಸಿದ್ದಾರೆ.

Home add -Advt

ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಪವಿತ್ರಾ ಹಾಗೂ ತಮ್ಮ ರಾಕೇಶ್ ಸೇರಿ ಕುಟುಂಬದ ವಿರುದ್ಧ ತಿಪಟೂರಿನ ಕಿಬ್ಬಾನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button