
ಪ್ರಗತಿವಾಹಿನಿ ಸುದ್ದಿ: ಮೆಟ್ರೋ ನಿಲ್ದಾಣದಲ್ಲಿ ಸಾರ್ವಜನಿಕವಾಗಿಯೇ ಯುವಕ-ಯುವತಿ ರೊಮ್ಯಾನ್ಸ್ ನಲ್ಲಿ ತೊಡಗಿದ್ದು, ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸ್ವಲ್ಪವೂ ಲಜ್ಜೆ ಇಲ್ಲದೇ, ಅಕ್ಕಪಕ್ಕದಲ್ಲಿ ಜನರು ನಿಂತಿದ್ದರೂ ಕ್ಯಾರೇ ಎನ್ನದೇ ಯುವ ಜೋಡಿ ರಾಜಾರೋಷವಾಗಿ ರೋಮ್ಯಾನ್ಸ್ ನಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ೩ನೇ ಪ್ಲಾಟ್ ಫಾರಂ ನಲ್ಲಿ ಈ ಘಟನೆ ನಡೆದಿದೆ.
ಮೆಟ್ರೋ ನಿಲ್ದಾಣದಲ್ಲಿ ಜೋಡಿಯ ಅಸಭ್ಯ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕವಾಗಿ, ಮೆಟ್ರೋ ನಿಲ್ದಾಣದಲ್ಲಿ ಈ ರೀತಿ ವರ್ತಿಸಿರುವ ಯುವಕ-ಯುವತಿಯ ವಿರುದ್ಧ
ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.