ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಭಾರತದಲ್ಲಿ ನಡೆಯುತ್ತಿರುವ ಅಂಧರ ಕ್ರಿಕೆಟ್ ವಿಶ್ವಕಪ್ 2022 ರಲ್ಲಿ ಭಾಗವಹಿಸಲು 34 ಪಾಕಿಸ್ತಾನಿ ಆಟಗಾರರು ಮತ್ತು ಅಧಿಕಾರಿಗಳಿಗೆ ವೀಸಾಗಳನ್ನು ನೀಡಲು ಗೃಹ ವ್ಯವಹಾರಗಳ ಸಚಿವಾಲಯ (MHA) ಅನುಮತಿ ನೀಡಿದೆ.
ಭಾನುವಾರವಷ್ಟೇ ಪಾಕಿಸ್ತಾನ ಅಂಧರ ಕ್ರಿಕೆಟ್ ಕೌನ್ಸಿಲ್ (PBCC) ಹೇಳಿಕೆಯಲ್ಲಿ ತನ್ನ ತಂಡವು ಭಾರತದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅನುಮತಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿತ್ತು.
ದುರದೃಷ್ಟಕರ ಘಟನೆಯು ಪಾಕಿಸ್ತಾನ ಅಂಧರ ಕ್ರಿಕೆಟ್ ತಂಡವನ್ನು ಕಂಗಾಲಾಗಿಸಿದೆ” ಎಂಂದಿದ್ದ PBCC “ಭಾರತದ ಈ ತಾರತಮ್ಯದ ಕೃತ್ಯ.ಖಂಡನೀಯ. ಏಕೆಂದರೆ ಕ್ರೀಡೆಯು ಪ್ರಾದೇಶಿಕ ರಾಜಕೀಯಕ್ಕಿಂತ ಮೇಲಿರಬೇಕು” ಎಂದು ಸಹ ಹೇಳಿತ್ತು.
ಆದರೆ ಪಾಕಿಸ್ತಾನ ತಂಡ ಅನುಮತಿ ಪಡೆಯುವುದರೊಂದಿಗೆ, 12 ದಿನಗಳ ಪಂದ್ಯಾವಳಿಯಲ್ಲಿ ಏಳು ತಂಡಗಳು ಉನ್ನತ ಟಾಪ್ ಆನರ್ ಗಾಗಿ ಸ್ಪರ್ಧಿಸಲಿವೆ.
ಬಾಂಗ್ಲಾದೇಶ, ಆಸ್ಟ್ರೇಲಿಯಾ, ಶ್ರೀಲಂಕಾ, ನೇಪಾಳ ಮತ್ತು ದಕ್ಷಿಣ ಆಫ್ರಿಕಾ ಕೂಟದಲ್ಲಿ ಸ್ಪರ್ಧಿಸುವ ಇತರ ರಾಷ್ಟ್ರಗಳಾಗಿವೆ.
ಬೆಳಗಾವಿ: ಭೀಕರ ಅಪಘಾತಕ್ಕೆ ಇಬ್ಬರು ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ