ಪ್ರಗತಿವಾಹಿನಿ ಸುದ್ದಿ: ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಅರವಿಂದ ಶ್ರೀವಾಸ್ತವ ಅವರು ಇಂದು ಹುಬ್ಬಳ್ಳಿ, ಗದಗ ರಸ್ತೆಯ ರೈಲು ಸೌಧದ ಜಿಎಂಗಳ ಕಾನ್ಫರೆನ್ಸ್ ಹಾಲ್ ನಲ್ಲಿ ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರೊಂದಿಗೆ ಸುರಕ್ಷತಾ ಸಭೆ ನಡೆಸಿದರು.
ರೈಲ್ವೆ ಸುರಕ್ಷತೆಯನ್ನು ಹೆಚ್ಚಿಸುವ ಈ ನಿರ್ಣಾಯಕ ಚರ್ಚೆಯ ನಂತರ ಅರವಿಂದ್ ಶ್ರೀವಾಸ್ತವ ಅವರು 10 ಉದ್ಯೋಗಿಗಳಿಗೆ ಸುರಕ್ಷತಾ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಹುಬ್ಬಳ್ಳಿ ವಿಭಾಗದಿಂದ 3, ಬೆಂಗಳೂರು ವಿಭಾಗದಿಂದ 2 ಮತ್ತು ಮೈಸೂರು ವಿಭಾಗದಿಂದ 5 ಉದ್ಯೋಗಿಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು.
ಕರ್ತವ್ಯದ ಸಮಯದಲ್ಲಿ ಅವರ ಜಾಗರೂಕತೆ, ಅಹಿತಕರ ಘಟನೆಗಳನ್ನು ತಪ್ಪಿಸುವಲ್ಲಿ ಮತ್ತು ರೈಲು ಕಾರ್ಯಾಚರಣೆಯಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಅವರ ಕೊಡುಗೆಯನ್ನು ಶ್ಲಾಘಿಸಿ ಪ್ರಶಸ್ತಿಗಳನ್ನು ನೀಡಲಾಯಿತು.
ಹುಬ್ಬಳ್ಳಿ ವಿಭಾಗ: ಮಂಥಾ ಜಗನ್ನಾಥ ರಾವ್, ವಿಶ್ವೇಶ್ವರ ಆನಂದ ಮತ್ತು ತಾರಾಚಂದ್ ಝಾಟ್
ಬೆಂಗಳೂರು ವಿಭಾಗ: ಮಂಜುನಾಥನ ಹಾಗೂ ಬಿ.ರಾಮಾಂಜಿಯನೇಯಲು
ಮೈಸೂರು ವಿಭಾಗ: ಹರೀಶ್, ಆನಂದ, ಶ್ರೀಧರ್ ಡಿ. ಆರ್,ತಿಪ್ಪೇಶಪ್ಪ ಮತ್ತು ರವಿಕುಮಾರ ಗೆ ಪ್ರಶಸ್ಥಿ ನೀಡಿಲಾಯಿತು.
ಅರವಿಂದ್ ಶ್ರೀವಾಸ್ತವ ಅವರು ಸುರಕ್ಷತೆಗಾಗಿ ಉದ್ಯೋಗಿಗಳ ತ್ವರಿತ ಚಿಂತನೆ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು. “ಸುರಕ್ಷತೆ ಮೊದಲು ಮತ್ತು ಸುರಕ್ಷತೆ ಯಾವಾಗಲೂ” ನೈಋತ್ಯ ರೈಲ್ವೆಯ ಉನ್ನತ ಆದ್ಯತೆಯಾಗಿದೆ ಎಂದು ಪುನರುಚ್ಚರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ