Kannada NewsKarnataka NewsLatest

ಅಥಣಿ ತಾಲೂಕಿನಲ್ಲಿ ಲಘು ಭೂಕಂಪ; ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ

ಪ್ರಗತಿವಾಹಿನಿ ಸುದ್ದಿ, ಅಥಣಿ: ತಾಲೂಕಿನಲ್ಲಿ ಶನಿವಾರ ಬೆಳಿಗ್ಗೆ ಲಘು ಭೂಕಂಪನದ ಅನುಭವ ವಾಗಿದೆ.

ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಬೆಳಿಗ್ಗೆ 6.45ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ಬೆಳ್ಳಂಬೆಳಗ್ಗೆ ಈ ಅನುಭವದಿಂದ ಜನ ಬೆಚ್ಚಿಬಿದ್ದಿದ್ದಾರೆ.  ಸದ್ಯ ಯಾವುದೇ ಹಾನಿಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಕೂಡಲೆ ಕೆಲವರು ಆಡಳಿತದ ಗಮನಕ್ಕೆ ತಂದಿದ್ದು ತಹಸೀಲ್ದಾರ್, ಡಿಎಸ್ಪಿ ಹಾಗೂ ತಾಲೂಕು ಆಡಳಿತದ ಇತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ವಿಜಯಪುರದಲ್ಲೂ ಭೂಕಂಪನ: ಇದೇ ವೇಳೆ ಪಕ್ಕದ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದೆ.

ಬಸವನಬಾಗೇವಾಡಿ, ಚಡಚಣ, ತಿಕೋಟಾ ಹಾಗೂ ವಿಜಯಪುರ ನಗರದಲ್ಲಿ ಭೂಕಂಪನವಾಗಿದ್ದು  ರಿಕ್ಟರ್ ಮಾಪನದಲ್ಲಿ 4.9ರಷ್ಟು ತೀವ್ರತೆ ದಾಖಲಾಗಿದೆ. ಇದರಿಂದ ಜನ ಮತ್ತೆ ಭೀತಿಗೊಳಗಾಗಿದ್ದಾರೆ.

ವಿಜಯಪುರ ತಾಲೂಕಿನ ಕಣ್ಣೂರ ಗ್ರಾಮ ಪಂಚಾಯಿತಿಯಿಂದ 2.3  ಕಿ.ಮೀ. ವಾಯವ್ಯ ಭಾಗದ ಪ್ರದೇಶ ಸೇರಿದಂತೆ  ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದಲ್ಲಿ ಬೆಳಿಗ್ಗೆ 6.22ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ.

ಮಳೆ ಆರ್ಭಟ; ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ; ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗುವಂತೆ ಬೆಳಗಾವಿ ಜಿಲ್ಲಾಡಳಿತಕ್ಕೆ ಸೂಚನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button