ಪ್ರಗತಿವಾಹಿನಿ ಸುದ್ದಿ; ಮುಂಬೈ: ದೇಶದಲ್ಲಿಯ ಪ್ರತಿಷ್ಠಿತ ಮತ್ತು ಶ್ರೀಮಂತ ದೇವಸ್ಥಾನವಾಗಿರುವ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ನ ಸದಸ್ಯರಾಗಿ ಶಿವಸೇನೆಯ ಕಾರ್ಯದರ್ಶಿ ಮಿಲಿಂದ್ ನಾರ್ವೇಕರ್ ರನ್ನು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಶಿಫಾರಸಿನಿಂದ ಮಿಲಿಂದ್ ನಾರ್ವೇಕರ್ ಅವರನ್ನು ಟ್ರಸ್ಟ್ ನ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಈ ಯಾದಿಯಲ್ಲಿ ದೇಶದ 24ವ್ಯಕ್ತಿಗಳು ಓಳಗೊಂಡಿದ್ದಾರೆ.
ನನಗೆ ಈ ಅವಕಾಶ ಕೊಟ್ಟಿದ್ದಕ್ಕಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ, ನನ್ನ ಕೈಯಿಂದ ಸೇವಾ ಕಾರ್ಯ ನಡೆಯಬೇಕೆಂದೇ ದೇವರು ಈ ಬಾಗಿಲನ್ನು ತೆರೆದಿದ್ದಾರೆ ಇದು ನನ್ನ ಭಾಗ್ಯ ಎಂದು ನಾರ್ವೇಕರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತಿರುಪತಿ ಟ್ರಸ್ಟ್ ನ ಸದಸ್ಯರಾಗಿ ಆಯ್ಕೆಯಾಗಬೇಕೆಂದು ದೇಶಾದ್ಯಂತದಿಂದ ದೊಡ್ಡ ಪ್ರಯತ್ನ ನಡೆದಿರುತ್ತದೆ. ರಾಜ್ಯದ ಮುಖ್ಯಮಂತ್ರಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಜತೆಗೆ ಸಂವಾದ ನಡೆಸಿ ಈ ನಿಯುಕ್ತಿಯನ್ನು ಸೂಚಿಸುತ್ತಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ,ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಪತ್ರ ಬರೆದು ಈ ಸಂದರ್ಭದಲ್ಲಿ ಮಿಲಿಂದ್ ನಾರ್ವೇಕರ್ ನಿಯುಕ್ತಿಗಾಗಿ ಶಿಫಾರಸು ಮಾಡಿದ್ದರು.
ಸಾಮಾನ್ಯ ಕಾರ್ಯಕರ್ತನಿಂದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಪ್ತ:
ಆಂಧ್ರಪ್ರದೇಶ ಸರ್ಕಾರದಿಂದ ಬಿಡುಗಡೆಗೊಳಿಸಲಾದ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ನ ಸದಸ್ಯರ ಯಾದಿಯಲ್ಲಿ ದೇಶದಿಂದ 24 ವ್ಯಕ್ತಿಗಳನ್ನು ಆಯ್ಕೆ ಮಾಡಲಾದರೂ ಮಹಾರಾಷ್ಟ್ರದಿಂದ ಈ ಯಾದಿಯಲ್ಲಿ ಶಿವಸೇನೆಯ ಕಾರ್ಯದರ್ಶಿ ಮಿಲಿಂದ್ ನಾರ್ವೇಕರ್ ಅವರ ಆಯ್ಕೆ ರಾಜಕೀಯ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಾರ್ವೇಕರ್ ಅವರು ಮುಖ್ಯಮಂತ್ರಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯವರ ವಿಶ್ವಸ್ಥ ಸಹಕಾರಿಯಾಗಿದ್ದು, ಸಾಮಾನ್ಯ ಕಾರ್ಯಕರ್ತನಿಂದ ಉದ್ಧವ್ ಠಾಕ್ರೆಯ ಅವರ ಆಪ್ತ ಮತ್ತು ಶಿವಸೇನಾ ಕಾರ್ಯದರ್ಶಿಯಾಗಿ ನಾರ್ವೇಕರ ರಾಜಕೀಯ ಪ್ರವಾಸ ಅಚ್ಚರಿ ಮೂಡಿಸುವಂತಿದೆ. ಈ ಮೊದಲು ನಾರ್ವೇಕರ ಹೆಗಲಿಗೆ ಮುಂಬೈ ಕ್ರಿಕೆಟ್ ಸಂಘಟನೆಯ ಮುಂಬೈ ಪ್ರೀಮಿಯರ್ ಲೀಗ್ ಮತ್ತು ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ನೀಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ