ಪ್ರಗತಿವಾಹಿನಿ ಸುದ್ದಿ; ಗೋವಾ: ಇತ್ತೀಚೆಗೆ ಗೋವಾ ಬೀಚ್ ನಲ್ಲಿ ನಗ್ನವಾಗಿ ಓಡಿ ಹುಟ್ಟು ಹಬ್ಬ ಆಚರಿಸಿದ್ದ ಖ್ಯಾತ ಮಾಡೆಲ್, ನಟ ಮಿಲಿಂದ್ ಸೋಮನ್ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.
ಗೋವಾ ಬೀಚ್ ನಲ್ಲಿ ಅಶ್ಲೀಲ ಫೋಟೋ ಶೂಟ್ ಮಾಡಿದ ಬೆನ್ನಲ್ಲೇ ನಟಿ ಪೂನಂ ಪಾಂಡೆಯನ್ನು ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಗೋವಾ ಬೀಚ್ ನಲ್ಲಿ ಬೆತ್ತಲಾಗಿ ಓಡಿ ಫೋಟೋಗೆ ಪೋಸ್ ನೀಡಿದ್ದ ಮಿಲಿಂದ್ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಯಾಕೆ ಎಂದು ನೆಟ್ಟಿಗರು ಗರಂ ಆಗಿದ್ದರು. ಅಲ್ಲದೇ ಗೋವಾ ಸುರಕ್ಷಾ ಮಂಚ್ ಮಿಲಿಂದ್ ವಿರುದ್ಧ ದೂರು ದಾಖಲಿಸಿತ್ತು.
ಇದರ ಬೆನ್ನಲ್ಲೇ ಈಗ ಗೋವಾ ಪೊಲೀಸರು ಮಿಲಿಂದ್ ಸೋಮನ್ ವಿರುದ್ಧ, ಐಪಿಸಿ ಸೆಕ್ಷನ್ 294 ಹಾಗೂ 67ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಅಂದ ಹಾಗೇ ಮಾದೆಲ್ ಮಿಲಿಂದ್ ಸೋಮನ್ ಇತ್ತೀಚೆಗೆ 55ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ಗೋವಾ ಬೀಚ್ ನಲ್ಲಿ ಬೆತ್ತಲಾಗಿ ಓಡಿ ಫೋಟೋಗೆ ಪೋಸ್ ನೀಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ