Latest

ಕಟ್ಟಿಗೆಯಿಂದ ಹೊಡೆದು ಹೆಂಡತಿ-ಮಗಳನ್ನು ಕೊಂದ ಗಂಡ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ:  ವ್ಯಕ್ತಿಯೋರ್ವ ಕಟ್ಟಿಗೆಯಿಂದ ಹೊಡೆದು ಹೆಂಡತಿ ಹಾಗೂ ಮಗಳನ್ನು ಭೀಕರವಾಗಿ ಹತ್ಯೆಗೈದ ಘಟನೆ ಕಲಬುರ್ಗಿ ಜಿಲ್ಲೆ ಸೇಡಂ ಪಟಣದ ಈಶ್ವರ್ ನಗರದಲ್ಲಿ ನಡೆದಿದೆ.

46 ವರ್ಷದ ದಿಗಂಬರ್ ತಡರಾತ್ರಿ ತನ್ನ ಪತ್ನಿ ಹಾಗೂ ಮಗಳನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಜಗದೀಶ್ವರಿ (45), ಮಗಳು ಪ್ರಿಯಾಂಕಾ (11) ಕೊಲೆಯಾದ ದುರ್ದೈವಿಗಳು.

ಪತ್ನಿ ಶೀಲಶಂಕಿಸಿ ಜಗಳ ಆರಂಭಿಸಿದ ದಿಗಂಬರ್, ಕಟ್ಟಿಗೆಯಿಂದ ಪತ್ನಿಯನ್ನು ಮನಬಂದಂತೆ ಹೊಡೆದು ಸಾಯಿಸಿದ್ದಾನೆ. ಬಳಿಕ ಮಗಳನ್ನು ಹೊಡೆದು ಕೊಂದಿದ್ದಾನೆ ಎನ್ನಲಾಗಿದೆ.

ಮುಂಜಾನೆ ಪ್ರಕರಣ ಬೆಳಕಿಗೆ ಬರುತ್ತಿದಂತೆ ಕಾರ್ಯಪ್ರವೃತ್ತರಾದ ಸೇಡಂ ಪೊಲೀಸರು ಆರೋಪಿ ದಿಗಂಬರ್ ನನ್ನು ಬಂಧಿಸಿದ್ದಾರೆ.
ಅಯೋಧ್ಯೆ ಮಾದರಿಯಲ್ಲಿ ದೇವಾಲಯಗಳ ರಕ್ಷಣೆಗೆ ಯೋಜನೆ

Home add -Advt

Related Articles

Back to top button