
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ದುಬಾರಿ ದುನಿಯಾ ಆರಂಭವಾಗಿದೆ. ಅಗತ್ಯವಸ್ತುಗಳು, ತರಕಾರಿ ಬೆಲೆ ಗಗನಕ್ಕೇರಿರುವ ಮಧ್ಯೆ ಇಂದಿನಿಂದ ಹಾಲು, ಮೊಸರಿನ ದರದಲ್ಲಿ ಏರಿಕೆಯಾಗಿದೆ.
ಪ್ರತಿ ಲೀಟರ್ ನಂದಿನಿ ಹಾಲಿನ ದರದಲ್ಲಿ 3 ರೂಪಾಯಿ ಏರಿಕೆಯಾಗಿದೆ. ಟೋನ್ಡ್ ಹಾಲಿನ ದರ 39ರೂಯಿಯಿಂದ 42 ರೂಪಾಯಿಗೆ ಏರಿಕೆಯಾಗಿದೆ. ಮೊಸರು ಪ್ರತಿ ಲೀಟರ್ ಗೆ 47ರೂಪಾಯಿಂದ 50 ರೂಪಾಯಿಗೆ ಏರಿಕೆಯಾಗಿದೆ.
ಮಜ್ಜಿಗೆ 200ml 8 ರೂಪಾಇಂದ 9 ರೂಪಾಯಿಗೆ ಏರಿಕೆಯಾಗಿದೆ. ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಟೆಲ್ ಗಳಲ್ಲಿ ಇಂದಿನಿಂದ ಟೀ, ಕಾಫಿ, ತಿಂಡಿ, ತಿನಿಸುಗಳ ದರವೂ ಏರಿಕೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ