Kannada NewsKarnataka News

ಮಿಲೇನಿಯಮ್ ಗಾರ್ಡನ್‌  ಶಗುನ್ ಸಿಲ್ಕ್ ಟ್ರೆಂಡ್ಸ್ ಪ್ರದರ್ಶನ ಇಂದು ಕೊನೆಯ ದಿನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ಮಿಲೇನಿಯಮ್ ಗಾರ್ಡನ್‌ ನಲ್ಲಿ ಏಪ್ರಿಲ್ ೯ ರಿಂದ ‘ಶಗುನ್’ ಆಯೋಜಿಸಿದ್ದ ಸಿಲ್ಕ್ ಟ್ರೆಂಡ್ಸ್ ಪ್ರದರ್ಶನಕ್ಕೆ ಬೆಳಗಾವಿಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಏಪ್ರಿಲ್ ೯ ರಿಂದ ಮಿಲೇನಿಯಮ್ ಗಾರ್ಡನ್‌ ನಲ್ಲಿ ನಡೆಯುತ್ತಿರುವ ಈ ಪ್ರದರ್ಶನಕ್ಕೆ ಶನಿವಾರ ಕೊನೆಯ ದಿನ. ದೇಶದ ವಿವಿಧ ಭಾಗಗಳಿಂದ ೫೦ ಕ್ಕೂ ಹೆಚ್ಚು ನೇಕಾರರು ಭಾಗವಹಿಸಿದ್ದಾರೆ ಹಾಗೂ ಕರ್ನಾಟಕದ ಕ್ರೆಪ್ ಸಿಲ್ಕ್, ಜಾರ್ಜೆಟ್ ಸಿಲ್ಕ್, ಸೂಟ್ ಮತ್ತು ಸ್ಟೋಲ್; ತಮಿಳನಾಡಿನ ಕಾಂಜೀವರಂ ಸಿಲ್ಕ್ ಸೀರೆ ಮತ್ತು ಡಿಸೈನರ ಫ್ಯಾನ್ಸಿ ಸೀರೆ; ಆಂಧ್ರಪ್ರದೇಶದ ಧರ್ಮಾವರಂ, ಮಂಗಳಗಿರಿ, ಗಡ್ವಾಲ್ ಸೀರೆಗಳು; ಮಹಾರಾಷ್ಟ್ರದ ಡಿಸೈನರ್ ಎಂಬ್ರಾಯಿಡರಿ ಡ್ರೆಸ್ ಮಟೀರಿಯಲ್ಸ್; ಪಂಜಾಬಿನ ಪಟಿಯಾಲಾ ಡ್ರೆಸ್ ಮಟೀರಿಯಲ್ಸ್; ಒರಿಸ್ಸಾದ ಸಂಬಲ್‌ಪುರಿ, ಹ್ಯಾಂಡ್‌ಲೂಮ್ ಸಿಲ್ಕ್ ಕಾಟನ್; ಛತ್ತೀಸ್‌ಗಡಿನ ರಾ ಸಿಲ್ಕ್ ಮತ್ತು ದುಪ್ಪಟ್ಟಾ; ಮಧ್ಯಪ್ರದೇಶದ ಮಾಹೇಶ್ವರಿ, ಚಂದೇರಿ ಸಿಲ್ಕ್ ಸೀರೆ; ಪಶ್ಚಿಮ ಬಂಗಾಲದ ಬಲೂಚರಿ, ಕಂಠಾ ಸೀರೆ; ಅಸ್ಸಾಂ ಮುಗಾ ಮತ್ತು ಎರಿ ಸಿಲ್ಕ್ ಸೀರೆ; ಜಮ್ಮು ಮತ್ತು ಕಾಶ್ಮೀರದ ಪಾಶ್ಮಿನಾ ಮತ್ತು ರಾಜಸ್ಥಾನ: ಕೋಟಾ ಸಿಲ್ಕ್, ಹ್ಯಾಂಡ್ ಬ್ಲಾಕ್ ಪ್ರೀಂಟ ಡ್ರೆಸ್ ಮತ್ತು ಸೀರೆ ಮತ್ತು ಕೃತಕ ಆಭರಣಗಳು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಮಹಿಳೆಯರ ಪಾದರಕ್ಷೆಗಳ ಉತ್ಪಾದನೆಯಲ್ಲಿ ಪ್ರಮುಖವಾಗಿರುವ ಪಂಜಾಬಲ್ಲಿ ತಯಾರಿಸಿದ ‘ಮೊಜರಿ ಜೂತೆ’ ಮಹಿಳೆಯರ ಗಮನ ಸೆಳೆಯುತ್ತಿವೆ. ಪ್ರದರ್ಶನವು ೧೭ ಏಪ್ರಿಲ್ – ಶನಿವಾರದವರೆಗೆ ಮಾತ್ರ ಇದ್ದು, ಇದರ ಲಾಭವನ್ನು ಪಡೆದುಕೊಳ್ಳುವಂತೆ ಸಂಘಟಕರು ಕೋರಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button