Kannada NewsLatestNational

*ಮಕರ ಜ್ಯೋತಿ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು*

ಪ್ರಗತಿವಾಹಿನಿ ಸುದ್ದಿ: ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯಂದು ಜ್ಯೋತಿ ರೂಪದಲ್ಲಿ ಭಕ್ತರಿಗೆ ಅಯ್ಯಪ್ಪನ ದರ್ಶನವಾಗಿದ್ದು, ಕೇರಳದ ಶಬರಿಮಲೆಯಲ್ಲಿ ಉದ್ಭವಿಸುವ ಮಕರ ಜ್ಯೋತಿಯನ್ಮು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು.

ಶಬರಿಮಲೆ ದೇಗುಲದಲ್ಲಿ ಮಕರಜ್ಯೋತಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಸಾಗರ ನೆರೆದಿತ್ತು. ಸಂಜೆ 6:43 ರಿಂದ 6:46ರ ಸುಮಾರಿಗೆ ಅಯ್ಯಪ್ಪ ದೇಗುಲದ ಎದುರಿನ ಪೊನ್ನಂಬಲಮೇಡುವಿನಲ್ಲಿ ಜ್ಯೋತಿ ದರ್ಶನವಾಯಿತು. ಈ ವೇಳೆ ಅಯ್ಯಪ್ಪನ ಭಕ್ತಿಗೀತೆ ಗುಣಗಾನ ಮಾಡುತ್ತಾ ಭಕ್ತರು ಜ್ಯೋತಿ ಕಣ್ತುಂಬಿಕೊಂಡರು. 

ಶಬರಿಮಲೆ ಅಯ್ಯಪ್ಪನ ದೇಗುಲದಲ್ಲಿ ಬುಧವಾರ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ-ಪುನಸ್ಕಾರಗಳು ಆಯೋಜನೆಗೊಂಡಿದ್ದವು. ಪಂದಳ ರಾಜಮನೆತನದಿಂದ ಆಭರಣಗಳನ್ನು ತಂದು ಆಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿ ವೇಳೆಗೆ ಜ್ಯೋತಿರೂಪದಲ್ಲಿ ಅಯ್ಯಪ್ಪನ ದರ್ಶನವಾಯಿತು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button