Belagavi NewsBelgaum NewsKannada NewsKarnataka News

*ಶ್ರವಣ ದೋಷವುಳ್ಳ ಬಾಲಕಿಗೆ ಶ್ರವಣ ಸಲಕರಣೆ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುತಗಾ ಗ್ರಾಮದ ಶ್ರವಣ ದೋಷವುಳ್ಳ ಬಾಲಕಿ ಕುಮಾರಿ ಆರಾಧ್ಯ ಜ. ಪಾಟೀಲ ಇವಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಧನ ಸಲಕರಣೆ ಯೋಜನೆಯಡಿ ಇಂದು ಸಚಿವೆ ಲಕ್ಷಮೀ ಹೆಬ್ಬಾಳ್ಕರ್ ಶ್ರವಣ ಸಾಧನವನ್ನು ವಿತರಿಸಿದರು.

ಇದೇ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಗುವಿನ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಗುವಿನ ಜೊತೆ ಕೆಲಕಾಲ ಕಳೆದು, ಅವಳ ನಗುವಿಗೆ ಸಾಕ್ಷಿಯಾದರು.

ಈ ಸಮಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪನಿರ್ದೇಶಕರು, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಹಾಗೂ ಡಿ.ಡಿ.ಆರ್.ಸಿ ಸಿಬ್ಬಂದಿ ಉಪಸ್ಥಿತರಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button