Belagavi NewsBelgaum NewsKannada NewsKarnataka News

ಗ್ರಾಮೀಣ ಕ್ಷೇತ್ರದ ಮನೆ ಮಗಳು ರಾಜ್ಯದ ಮನೆಮಗಳಾಗಿರುವುದಕ್ಕೆ ಸಂಭ್ರಮಿಸಿದ ಗ್ರಾಮಸ್ಥರು; ಬೆಳವಟ್ಟಿ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸನ್ಮಾನ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸಚಿವರಾದ ನಂತರ ಮೊದಲ ಬಾರಿಗೆ ತಮ್ಮ ಊರಿಗೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬೆಳವಟ್ಟಿ ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿದರು.

​ಗ್ರಾಮೀಣ ಕ್ಷೇತ್ರದ ಮನೆ ಮಗಳು ಸಚಿವರಾಗಿ ರಾಜ್ಯದ ಮನೆಮಗಳಾಗಿರುವುದಕ್ಕೆ ಸಂಭ್ರಮಿಸಿದ ಗ್ರಾಮಸ್ಥರು, ಸಚಿವರಾಗಿ ಇಡೀ ರಾಜ್ಯದ ಸೇವೆ ಸಲ್ಲಿಸಲು ಶುಭ ಹಾರೈಸಿದರು. 

​ಗ್ರಾಮದಲ್ಲಿ ಈ ಹಿಂದೆ ಮಾಡಿದ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದ ಸಚಿವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ತರುವುದಾಗಿ ಭರವೆಸ ನೀಡಿದರು. ತಾವು ಸಚಿವರಾಗುವುದಕ್ಕೆ ಗ್ರಾಮೀಣ ಕ್ಷೇತ್ರದ ಮತದಾರರ ಆಶಿರ್ವಾದವೇ ಕಾರಣ ಎಂದ ಲಕ್ಷ್ಮೀ ಹೆಬ್ಬಾಳಕರ್, ಮುಂದೆ ಸಹ ಎಲ್ಲ ರೀತಿಯ ಪ್ರೋತ್ಸಾಹ, ಬೆಂಬಲವಿರಲಿ ಎಂದು ವಿನಂತಿಸಿದರು. 

Home add -Advt

ಈ ಸಂದರ್ಭದಲ್ಲಿ ನಾರಾಯಣ ನಾಲವಡಿ, ಮನೋಹರ ಬೆಳಗಾಂವ್ಕರ್, ಅರ್ಜುನ ಪಾಟೀಲ, ವೈಷ್ಣವಿ ಸುತಾರ, ಆರ್.ಬಿ.ದೇಸಾಯಿ, ಮಾರುತಿ ಕಾಂಬಳೆ, ಮ​ಧುಕರ್ ನಲವಡೆ, ವಿಠ್ಠಲ ಪಾಟೀಲ, ಸಂಜು ದೇಸಾಯಿ, ಮಹಾದೇವಿ ಮೇದಾರ್, ರಾಮನಿಂಗ ಪಾಟೀಲ, ಡಿ.ಎನ್.ದೇಸಾಯಿ, ಅನುರಾಧಾ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button