*ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ನಿಲ್ಲದು* *ದುರ್ಗಾದೇವಿ ಭವನ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಗಣೇಶಪುರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ದುರ್ಗಾದೇವಿ ಭವನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಸಂಜೆ ಉದ್ಘಾಟಿಸಿದರು.
ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಎಂದಿಗೂ ನಿಲ್ಲುವುದಿಲ್ಲ. ವಾರದಲ್ಲಿ 3 ದಿನ ಕ್ಷೇತ್ರದಲ್ಲಿರಲು ನಾನು ಪ್ರಯತ್ನಿಸುತ್ತಿದ್ದೇನೆ. ನಾನು ರಾಜ್ಯದ ಯಾವುದೇ ಭಾಗದಲ್ಲಿರಲಿ, ಇಲ್ಲಿನ ಕೆಲಸಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು. ನನ್ನ ಮಗ ಮೃಣಾಲ ಹೆಬ್ಬಾಳಕರ್, ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ತಂಡ ಗ್ರಾಮೀಣ ಕ್ಷೇತ್ರದಲ್ಲಿನ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ ಎಂದು ಹೆಬ್ಬಾಳಕರ್ ತಿಳಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ತಿಪ್ಪಣ್ಣ ದಂಡಗಲ್ಕರ್, ಯುವರಾಜ ಕದಂ, ಮಲ್ಲೇಶ್ ಚೌಗುಲೆ, ದಿನೇಶ್ ಲೋಹಾರ್, ಲಲಿತಾ ದಂಡಗಲ್ಕರ್, ರಂಜನಾ ನಾಯ್ಕ್, ನಿಖಿತಾ ದಂಡಗಲ್ಕರ್, ಮಂಜುಶಾ ನಾಯಕ್, ಸಾಗರ್ ಲಾಖೆ, ಉಮೇಶ್ ಚೋಪಡೆ, ಅಶ್ವಿನಿ ಲೋಹಾರ್, ಬಾಳಕೃಷ್ಣ ಚೋಪಡೆ ಹಾಗೂ ದೇವಸ್ಥಾನದ ಟ್ರಸ್ಟ್ ಕಮೀಟಿಯವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ