GIT add 2024-1
Laxmi Tai add
Beereshwara 33

*ಮೋಟಾರ್ ಸೈಕಲ್ ಹಾಗೂ ಎಮ್ಮೆ ಓಟದ ಸ್ಫರ್ಧೆ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಹಿಂಡಲಗಾ ಗ್ರಾಮದ ಶಿವ‌ನಗರದಲ್ಲಿ ಸ್ವಯಂಭು ಗವಳಿ ಶಹರಿ ಹಾಗೂ ಗ್ರಾಮೀಣ ವಿಕಾಸ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೋಟಾರ್ ಸೈಕಲ್ ಹಾಗೂ ಎಮ್ಮೆಯ ಓಟದ ಶರ್ಯತ್ ನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.

Emergency Service

ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ಗ್ರಾಮೀಣ ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರಮುಖ ಕೆಲಸ ಮಾಡುತ್ತಿರುವ ಗೌಳಿ ಸಮಾಜದ ಕಾರ್ಯ ಶ್ಲಾಘನೀಯವಾಗಿದೆ. ರೈತನ ಮಗಳಾಗಿ ಗೌಳಿಗರ ಶ್ರಮ ಜೀವನ ಅರ್ಥವಾಗುತ್ತದೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿ, ಕಾರ್ಯಕ್ರಮಕ್ಕೆ ಆರ್ಥಿಕ ನೆರವು ಘೋಷಿಸಿದರು. 

ಈ ಸಮಯದಲ್ಲಿ ವಿಠ್ಠಲ ದೇಸಾಯಿ, ಚೇತನಾ ಅಗಸ್ಗೇಕರ್, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಗಜಾನನ ಬಾಂಡೇಕರ್, ಪ್ರವೀಣ ಪಾಟೀಲ, ರಾಹುಲ್ ಉರನಕರ್, ರಾಮಚಂದ್ರ ಕುದ್ರೆಮನಿಕರ್ ಮುಂತಾದವರು ಉಪಸ್ಥಿತರಿದ್ದರು.

Bottom Add3
Bottom Ad 2