Belagavi NewsBelgaum NewsKannada NewsKarnataka NewsPolitics
*ನಬೀ ಸಾಹೇಬ ದರ್ಗಾ ಸಮುದಾಯ ಭವನ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮುತ್ನಾಳ ಗ್ರಾಮದಲ್ಲಿ ಸುಮಾರು 20 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಬೀ ಸಾಹೇಬ ದರ್ಗಾ ಸಮುದಾಯ ಭವನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಉದ್ಘಾಟಿಸಿದರು.

ಗ್ರಾಮೀಣ ಕ್ಷೇತ್ರದಲ್ಲಿ ಜಾತಿ, ಮತ ಭೇದವಿಲ್ಲದೆ ಎಲ್ಲ ಧರ್ಮದವರಿಗೆ ಸೇರಿದ 140ಕ್ಕೂ ಹೆಚ್ಚು ಧಾರ್ಮಿಕ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ. ಇಡೀ ಕ್ಷೇತ್ರದಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕೆನ್ನುವುದೇ ನನ್ನ ಬಯಕೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ವೇಳೆ ಕೇದಾರ್ ಶಾಖಾ ಪೀಠದ ಶ್ರೀ ಶಿವಾನಂದ ಶಿವಾಚರ್ಯರು, ಅಶ್ರಫ್ ಪೀರ್ ಖಾದ್ರಿ ಅಜ್ಜನವರು, ದರ್ಗಾ ಅಜ್ಜನವರಾದ ಎಂ.ಕೆ.ಹುಬ್ಬಳ್ಳಿ, ಪಿ.ಜೆ.ಪಾರಿಶ್ವಾಡ್, ಅಡಿವೆಪ್ಪ ಪಾಟೀಲ, ದೇವೆಂದ್ರ ತಿಗಡಿ, ಸುನಿಲ ಅಂಕಲಗಿ, ರುದ್ರಪ್ಪ ಮಂಗಳಗಟ್ಟಿ, ಬಸನಗೌಡ ಹುಬ್ಬಳ್ಳಿ, ಸಲೀಂ ನದಾಫ್ ಇದ್ದರು.