Belagavi NewsBelgaum NewsKannada NewsKarnataka NewsLatest

*ದೇವಸ್ಥಾನದ ಕಳಸಾರೋಹಣ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಂದೋಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕರಿಸಿದ್ದೇಶ್ವರ ಮತ್ತು ಜಡಿಸಿದ್ಧೇಶ್ವರ ದೇವಸ್ಥಾನದ ವಾಸ್ತು ಶಾಂತಿ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಸಂಜೆ ಉದ್ಘಾಟಿಸಿದರು. 

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ ಗ್ರಾಮಸ್ಥರ ಕಾರ್ಯವನ್ನು ಶ್ಲಾಘಿಸಿದ ಸಚಿವರು, ಗ್ರಾಮದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವಂತೆ ವಿನಂತಿಸಿದರು.

ಶಾಸಕಿಯಾದ ನಂತರ ಮತ್ತು ಸಚಿವೆಯಾದ ನಂತರ ಗ್ರಾಮಕ್ಕೆ ಬಹಳಷ್ಟು ಯೋಜನೆಗಳನ್ನು ತರಲಾಗಿದೆ. ಅಭಿವೃದ್ಧಿ ನಿರಂತರ ಮುಂದುವರಿಯಲಿದೆ. ಇದಕ್ಕೆ ಎಲ್ಲರ ಸಹಕಾರ ಇರಲಿ ಎಂದು ಹೆಬ್ಬಾಳಕರ್ ವಿನಂತಿಸಿದರು.

ಈ ಸಮಯದಲ್ಲಿ ಸುರೇಶ ಪಾಟೀಲ, ರಾಕೇಶಗೌಡ ಪಾಟೀಲ, ಶಿವು ಸೈಬಣ್ಣವರ, ಶೀಲಾ ತಿಪ್ಪಣ್ಣಗೋಳ, ರಾಜು ಪಾಟೀಲ, ಕೃಷ್ಣ ಅನಗೊಳ್ಕರ್, ಸುರೇಶ ಮುಚ್ಚಂಡಿ, ಲಕ್ಷ್ಮಣ ಹಲಗೆಕರ್, ಭರ್ಮಾ ಶಹಾಪೂರಕರ, ಯಲ್ಲಪ್ಪ ಶಹಾಪೂರಕರ್, ಲಕ್ಷ್ಮಣ ಅಗಸಿಮನಿ, ನಾಗೇಶ ದೇಸಾಯಿ, ಮಲ್ಲಾರ್ದ ಮುಚ್ಚಂಡಿ, ಮಲ್ಲಪ್ಪ ಶಹಾಪೂರಕರ್, ಮಲ್ಲಪ್ಪ ತಿಪಣ್ಣಗೋಳ, ನಾಗೇಂದ್ರ ಕುರುಬರ, ಲಕ್ಷ್ಮಣ ಪೂಜೇರಿ, ಯುವರಾಜ ಕದಂ, ಯಲ್ಲಪ್ಪ ಶಹಾಪೂರಕರ್, ರಾಮನಿಂಗ ಅನಗೋಳ್ಕರ್, ನಾಗೇಂದ್ರ ಬೆಂಡಿಗೇರಿ, ನಿಂಗಪ್ಪ ಶಹಾಪೂರಕರ್ ಹಾಗೂ ಶ್ರೀ ಕರಿಸಿದ್ದೇಶ್ವರ ಮತ್ತು ಜಡಿಸಿದ್ದೇಶ್ವರ ದೇವಸ್ಥಾನ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.

Home add -Advt

Related Articles

Back to top button