
ಪ್ರಗತಿವಾಹಿನಿ ಸುದ್ದಿ; ತುಮಕೂರು: ಪತಿ ಕಿರುಕುಳಕ್ಕೆ ಬೇಸತ್ತ ಪತ್ನಿ 2 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿ ಕೆಂಕೆರೆ ಗ್ರಾಮದಲ್ಲಿ ನಡೆದಿದೆ.
ಪ್ರೇಮ ಎಂಬ ಮಹಿಳೆ ತನ್ನ 2 ವರ್ಷದ ರುಪಾ ಎಂಬ ಮಗುವಿನೊಂದಿಗೆ ಬಾವಿಗೆ ಹಾರಿದ್ದು, ಮಗು ಸಾವನ್ನಪ್ಪಿದೆ. ತಾಯಿ ಪ್ರೇಮಾಳನ್ನು ರಕ್ಷಿಸಲಾಗಿದೆ. ಪತಿ ಜಗದೀಶ್ ಕಿರುಕುಳಕ್ಕೆ ನೊಂದ ಮಹಿಳೆ ದುಡುಕಿನ ನಿರ್ಧಾರ ಮಾಡಿ, ಹೆತ್ತ ಮಗುವನ್ನೇ ಕಳೆದುಕೊಂಡಿದ್ದಾಳೆ.
ಬಾವಿಯಲ್ಲಿ ಜೋರಾದ ಶಬ್ಧ ಕೇಳುತ್ತಿದ್ದಂತೆ ತಕ್ಷಣ ಅಕ್ಕಪಕ್ಕದವರು ಓಡಿ ಬಂದು ನೋಡಿದ್ದಾರೆ. ತಾಯಿ-ಮಗು ಬಾವಿಗೆ ಹಾರಿರುವುದು ಕಂಡು ಇಬ್ಬರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಮಗು ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿದೆ. ಪ್ರೇಮಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಟೋದಲ್ಲಿ ಬಂದು ಸಿಐಡಿಗೆ ಶರಣಾದ ಅಕ್ರಮದ ಕಿಂಗ್ ಪಿನ್ !