Cancer Hospital 2
Beereshwara 36
LaxmiTai 5

ಮಾತೃಭಾಷೆ, ದೇವರ ಹೆಸರಲ್ಲಿ ಪ್ರತಿಜ್ಞೆಗೈದ ಸಚಿವ ಪ್ರಲ್ಹಾದ ಜೋಶಿ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಇಂದು ನಡೆದ 18ನೇ ಲೋಕಸಭೆ ಮೊದಲ ಅಧಿವೇಶನದಲ್ಲಿ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ನೂತನ ಸಚಿವ ಪ್ರಲ್ಹಾದ ಜೋಶಿ ಅವರು ಮಾತೃಭಾಷೆಯಲ್ಲೇ ಪ್ರಮಾಣ ವಚನ ಸ್ವೀಕರಿಸಿ ಸಂಸತ್ ನಲ್ಲಿ ಕನ್ನಡತನ ಎತ್ತಿ ಹಿಡಿದರು.

2024ರ ಲೋಕಸಭೆ ಚುನಾವಣೆ ಬಳಿಕ ನೂತನ ಸಂಸತ್ ಭವನದಲ್ಲಿ ಸೋಮವಾರ ಮೊದಲ ಬಾರಿ ಆಯೋಜಿಸಿದ್ದ ಅಧಿವೇಶನದ ವೇಳೆ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹ್ತಾಬ್  ಪ್ರಮಾಣ ವಚನ ಬೋಧಿಸಿದರು. 

ಈ ವೇಳೆ, ಧಾರವಾಡ ಲೋಕಸಭೆ ಕ್ಷೇತ್ರದಿಂದ ಸತತ 5ನೇ ಬಾರಿ ಬಿಜೆಪಿಯಿಂದ ಕಣಕ್ಕಿಳಿದು ಐತಿಹಾಸಿಕ ಗೆಲುವು ಸಾಧಿಸಿದ್ದ ಪ್ರಲ್ಹಾದ ಜೋಶಿ ಅವರು ಸಂಸತ್ ನಲ್ಲಿ ಪ್ರಧಾನಿ ಮೋದಿ ಸಂಗಡ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಸಕ್ತ ಅಧಿವೇಶನದಲ್ಲಿ “ಪ್ರಲ್ಹಾದ ವೆಂಕಟೇಶ ಜೋಶಿಯಾದ ನಾನು” ಎಂದು ಕನ್ನಡದಲ್ಲೇ ಮಾತನಾಡುತ್ತ, ಪ್ರತಿಜ್ಞಾ ಪತ್ರ ಓದಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

Emergency Service

ದೇಶದ ಅಖಂಡತೆ, ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಜತೆಗೆ ನನ್ನ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಶ್ರದ್ಧೆ ಮತ್ತು ನಿಷ್ಠೆಯಿಂದ ನಿರ್ವಹಿಸುವುದಾಗಿ ಪ್ರಮಾಣಗೈದರು.

ಪ್ರಧಾನಿ ಮೋದಿ ಸಂಪುಟದಲ್ಲಿ ಸತತ ಎರಡನೇ ಬಾರಿ ಸಚಿವರಾಗಿರುವ ಪ್ರಲ್ಹಾದ ಜೋಶಿ ಅವರು, ಬಿಜಿಪಿಯ ಹಿರಿಯ ನಾಯಕರಲ್ಲಿ ಒಬ್ಬರಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಮೊದಲು ದೇವರ ಪೂಜೆಗೈದು ವಿಶೇಷತೆ ಮೆರೆದರು.

ಇನ್ನು, ಸಂಸತ್ ಭವನದಲ್ಲಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಕನ್ನಡಾಭಿಮಾನದ ಜತೆಗೆ ಮಾತೃಭಾಷಾ ವೈಶಿಷ್ಟ್ಯ ಪ್ರದರ್ಶಿಸಿದರು.

Bottom Add3
Bottom Ad 2