ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ಯಾರಂಟಿ ಒಂದು ಸಾಧನೆ. 56000 ಕೋಟಿ ರೂಪಾಯಿ ನೀಡಲಾಗಿದೆ. ಏನೇ ಇದ್ದರೂ ವಿರೋಧ ಪಕ್ಷಗಳ ಪ್ರಶ್ನೆಗೆ ಸರ್ಕಾರ ಉತ್ತರ ಕೊಡಲಿದೆ ಎಂದು ಸರ್ಕಾರ ಕೇವಲ ಹಗರಣಗಳನ್ನು ಮುಚ್ಚಿಕೊಳ್ಳಲು ಪ್ರಯತ್ನ ಮಾಡಿದೆ. ಚಳಿಗಾಲದ ಅಧಿವೇಶನ ತೃಪ್ತಿ ತಂದಿಲ್ಲ ಎಂಬ ವಿರೋಧ ಪಕ್ಷದವರ ಹೇಳಿಕೆಗೆ ಸಚಿವ ಸಂತೋಷ ಲಾಡ್ ಟಾಂಗ್ ನೀಡಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 1.26 ಲಕ್ಷ ಕೋಟಿ ರೂಪಾಯಿ ಅಭಿವೃದ್ಧಿಗೆ ಇಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಭದ್ದವಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಕಟಕ ಅಭಿವೃದ್ಧಿಗೆ ಎಷ್ಟು ಹಣ ನೀಡಿದ್ದರು. ಈಗ ಅದಾನಿ ಕೇಸ್ ಮುಚ್ಚಿ ಹಾಕಲು ಒನ್ ನೇಷನ್ ಒನ್ ಎಲೆಕ್ಷನ್ ಮುನ್ನಲೆಗೆ ತಂದಿದ್ದಾರೆ. ಯು ಎಸ್ ಕೋರ್ಟ್ ಅದಾನಿ ಬಗ್ಗೆ ಹೇಳಿದ್ದೇನು?ಅದಾನಿ ಭ್ರಷ್ಟಾಚಾರ ಮಾಡಿದ್ದು ಎಲ್ಲಿ? ದೇಶದಲ್ಲಿ ಅದಾನಿ ಸಂಸ್ಥೆಗೆ ಏನೆಲ್ಲ ಕೊಡಲಾಗಿದೆ. ಭಾರತದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಯುಎಸ್ ಕೋರ್ಟ್ ಹೇಳಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ