Belagavi NewsBelgaum NewsKannada NewsKarnataka NewsNationalTravel

*ಬೆಳಗಾವಿ-ಮಿರಜ್ ವಿಶೇಷ ರೈಲುಗಳ ಸಂಚಾರ ಭಾಗಶಃ ರದ್ದು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕುಡಚಿ-ಉಗರ್ ಖುರ್ದ್ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಹಿನ್ನೆಲ್ಲೆಯಲ್ಲಿ, ಈ ಕೆಳಗಿನ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ

ಫೆಬ್ರವರಿ 8 ರಿಂದ 20, 2025 ರವರೆಗೆ, ಬೆಳಗಾವಿ-ಮಿರಜ್ ಕಾಯ್ದಿರಿಸದ ವಿಶೇಷ (ರೈಲು ಸಂಖ್ಯೆ 07303)  ರೈಲು ಕುಡಚಿವರೆಗೂ ಮಾತ್ರ ಸಂಚರಿಸಲಿದೆ. ಕುಡಚಿ ಮತ್ತು ಮಿರಜ್ ನಿಲ್ದಾಣಗಳ ನಡುವಿನ ಪ್ರಯಾಣ ರದ್ದಾಗಿದೆ. ಈ ರೈಲು ಕುಡಚಿ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ.

ಫೆಬ್ರವರಿ 8 ರಿಂದ 20, 2025 ರವರೆಗೆ, ರೈಲು ಸಂಖ್ಯೆ 07304 ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ  ರೈಲು ಮಿರಜ್ ನಿಲ್ದಾಣದ ಬದಲು ಕುಡಚಿ ನಿಲ್ದಾಣದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಕುಡಚಿ ಮತ್ತು ಮಿರಜ್ ನಿಲ್ದಾಣಗಳ ನಡುವಿನ ಪ್ರಯಾಣ ರದ್ದಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button