Kannada News

ಸಚಿವ ಶಿವರಾಮ ಹೆಬ್ಬಾರ ಬೆಳಗಾವಿ ಭೇಟಿ ಮತ್ತು ಇತರ ಪ್ರಮುಖ ಸುದ್ದಿಗಳು

ಜೂ.೨೨ ರಂದು ಕಾರ್ಮಿಕ ಮತ್ತು ಸಕ್ಕರೆ ಸಚಿವರ ಜಿಲ್ಲಾ ಪ್ರವಾಸ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಕಾರ್ಮಿಕ ಮತ್ತು ಸಕ್ಕರೆ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ ಅವರು ಸೋಮವಾರ (ಜೂ.೨೨) ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಜೂನ್ ೨೨ ರಂದು ಬೆಳಗ್ಗೆ ೧೦.೩೦ಕ್ಕೆ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಲಿದ್ದಾರೆ. ಬಳಿಕ ೧೧ ಗಂಟೆಗೆ ನಗರದ ಇ.ಎಸ್.ಐ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.
೧೧.೩೦ಕ್ಕೆ ನಗರದ ಕಂಗ್ರಾಳಿಯಲ್ಲಿ ಕಾರ್ಮಿಕ ಇಲಾಖೆಗೆ ಮಂಜೂರಾದ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ ೧೨.೩೦ ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಕ್ಕರೆ ಮತ್ತು ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಸಿಇಒ, ಪೊಲೀಸ್ ಅಧೀಕ್ಷಕರು ಮತ್ತು ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ
ಮಧ್ಯಾಹ್ನ ೩ ಗಂಟೆಗೆ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಸಾಯಂಕಾಲ ೫ ಗಂಟೆಗೆ ಬೆಳಗಾವಿಯಿಂದ ಯಲ್ಲಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 

ಹುಕ್ಕೇರಿ ಪುರಸಭೆ: ಅರ್ಜಿ ಅಹ್ವಾನ

ದಿನದಯಾಳು ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ವ್ಯಕ್ತಿಗದ ಉದ್ಯಮಶೀಲತೆ ಮತ್ತು ಎಸ್.ಎಚ್.ಜಿ ಬ್ಯಾಂಕ್ ಕ್ರೇಡಿಟ್ ಲಿಂಕೇಜ ಅಡಿಯಲ್ಲಿ ಸಾಲ ಸೌಲಭ್ಯ ಹಾಗೂ ಸ್ವ-ಸಹಾಯ ಸಂಘಗಳನ್ನು ರಚಿಸಲು ಮತ್ತು ಕೌಶಲ್ಯ ತರಬೇತಿಗಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಅರ್ಜಿಗಳನ್ನು ಸಲ್ಲಿಸಲು ಬಯಸುವರು ಜುಲೈ ೩ರ ಒಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪುರಸಭೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹುಕ್ಕೇರಿ ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳಿಗಾಗಿ ಕಾರ್ಯಗಾರ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಚೇರಿಯಲ್ಲಿ Wಕಿಒ&SP ಅಡಿ ಮಳೆಗಾಲ ಪೂರ್ವ ಗ್ರಾಮೀಣ ಕುಡಿಯುವ ನೀರಿನ ಜಲ ಮೂಲಗಳನ್ನು ಈಖಿಏ ಏiಣs ಹಾಗೂ ಬ್ಯಾಕ್ಟೇರಿಯಾಗಳ ಗುಣಮಟ್ಟ ಪರೀಕ್ಷೆಯ ಪ್ರಾತ್ಯಕ್ಷಿಕೆಯನ್ನು ಈಖಿಏ ಏiಣ ಮತ್ತು ಊ೨S ಗಿಚಿiಟs ವಿತರಕರ ಸಹಯೋಗದೊಂದಿಗೆ ಜೂನ್ ೧೮ ರಂದು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ವಾಟರ್ ಮ್ಯಾನಗಳು ಹಾಗೂ ಗಿWSಅ ಕಮೀಟಿ ಸದಸ್ಯರಿಗೆ ಕಾರ್ಯಗಾರ ಆಯೋಜಿಸಳಾಗಿತ್ತು. ಕಾರ್ಯಾಗಾರಕ್ಕೆ ಕಾರ್ಯನಿರ್ವಾಹಕ ಅಭಿಯಂತರರಾದ ಕೆ.ಎಸ್. ಅಸೂಟಿ ಅವರು ನೀರನ್ನು ಹೇಗೆ ಹಿತ-ಮಿತವಾಗಿ ಬಳಸಬೇಕು ಮತ್ತು ಅದನ್ನು ಹೇಗೆ ಶುದ್ಧವಾಗಿ ಇರಿಸಬೇಕೆಂದು ವಿವರವಾಗಿ ಮಾಹಿತಿ ನೀಡಿದರು.
ತರಬೇತಿ ಕಾರ್ಯಾಗಾರದಲ್ಲಿ ಸಹಾಯಕ ಅಭಿಯಂತರರಾದ ಪ್ರವೀಣ ಮಠಪತಿ, ಎಸ್,ಎ ಬಾಜಕ್ಕೆ, ಹಿರಿಯ ಭೂವಿಜ್ಙಾನಿಗಳಾದ ಎಸ್.ಸಿ.ಜೋಷಿ ಹಾಗೂ ಜಿಲ್ಲಾ ಪ್ರಯೋಗಾಲಯ ಸಿಬ್ಬಂದಿಗಳಾದ ಯು,ಎಮ್.ಮುಲ್ಲಾ, ವಿಜಯ ಹಣ ಕೇರಿ, ಮತ್ತು ಬಾಬುಗೌಡಾ ಪಾಟೀಲ ಉಪಸ್ಥಿತರಿದ್ದರು ಎಂದು ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಜೂನ್ ೨೦ ರಂದು ವಿದ್ಯುತ್ ನಿಲುಗಡೆ

ವಡಗಾಂವ ವಿದ್ಯುತ್ ವಿತರಣಾಕೇಂದ್ರದಿಂದ ಹೊರಡುವ ಎಫ್-೪ ಬಝಾರಗಲ್ಲಿ ಮತ್ತು ಎಫ್-೧೪ ಯಳ್ಳೂರ ರಸ್ತೆಪೂರಕದ ಮೇಲೆ ಬರುವ ಪ್ರದೇಶಗಳಿಗೆ ಜೂನ್ ೨೦ ರಂದು ಬೆಳಗ್ಗೆ ೧೦ ಗಂಟೆಯಿಂದ ಸಾಯಂಕಾಲ ೬. ಘಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಬಾಝಾರಗಲ್ಲಿ, ಶಹಾಪೂರ. ವಡಗಾಂವರೋಡ, ಯರಮಾಳ ರೋಡ, ವಿಷ್ಣುಗಲ್ಲಿ, ನೇಕಾರ ಕಾಲೂನಿ, ಯಳ್ಳೂರ ರೋಡ, ರಾಮದೇವಗಲ್ಲಿ, ಸೋನಾರಗಲ್ಲಿ, ಸಾಯಿ ನಗರ, ಭಾರತ ನಗರ, ಮತ್ತು ಸುತ್ತ ಮುತ್ತಲಿನ ಪ್ರದೇಶಗಳು. ಹಾಗೂ ಸಂಭಾಜಿ ನಗರ, ಆದರ್ಶ ನಗರ, ಯಳ್ಳೂರ ರಸ್ತೆ ಆನಂದ ನಗರ, ಯರಮಾಳ ರಸ್ತೆ ಅನ್ನಪೂರ್ಣೆಶ್ವರಿ ನಗರ, ಗಾಡೆ ಮಾರ್ಗ, ಮತ್ತು ಸುತ್ತ ಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಕಾರ್ಯ ನಿರ್ವಾಹಕಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button