Latest

ಕುತೂಹಲ ಕೆರಳಿಸಿದ ಸಚಿವ ಶ್ರೀರಾಮುಲು ನಡೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಸಚಿವ ಶ್ರೀರಾಮುಲು ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.

ಬೆಂಗಳೂರಿನ ಚಿಕ್ಕಜಾಲದಲ್ಲಿರುವ ಫಾರ್ಮ್ ಹೌಸ್ ನಿಂದ ಖಾಸಗಿ ಕಾರಿನಲ್ಲಿ ಆಗಮಿಸಿರುವ ಸಚಿವ ಶ್ರೀರಾಮುಲು ಮುಖ್ಯಮಂತ್ರಿ ಕಾವೇರಿ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದ್ದಾರೆ.

Related Articles

ಖಾತೆ ಬದಲಾವಣೆಯಿಂದಾಗಿ ಅಸಮಾಧಾನಗೊಂಡಿರುವ ಸಚಿವ ಶ್ರೀರಾಮುಲು ನಿನ್ನೆಯಿಂದ ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನವನ್ನೇ ಬಳಸುತ್ತಿದ್ದಾರೆ. ರಾಮುಲು ಅವರ ಈ ನಡೆ ಹಲವು ಕುತೂಹಲಕ್ಕೆ ಕಾರಣವಾಗಿದೆ. ಕೊಡುವುದಾದರೆ ಎರಡು ಖಾತೆಯನ್ನು ಕೊಡಿ. ಇಲ್ಲವಾದಲ್ಲಿ ನಾನು ಶಾಸಕನಾಗಿ ಮುಂದುವರೆಯುತ್ತೇನೆ ಎಂಬ ನಿರ್ಧಾರಕ್ಕೂ ಕೂಡ ರಾಮುಲು ಬಂದಿದ್ದಾರೆ ಎನ್ನಲಾಗಿದೆ.

Home add -Advt

Related Articles

Back to top button