Latest

ಆಹಾರ ಪದ್ಧತಿಯಲ್ಲಿನ ತಪ್ಪು ತಿಳಿವಳಿಕೆ ಮತ್ತು ಅವೈಜ್ಞಾನಿಕ ನಂಬಿಕೆಗಳು

– ರವಿ ಕರಣಂ.

ಭೂಮಿಯ ಮೇಲಿನ ಪ್ರತಿ ಜೀವಿಗಳಿಗೂ ಆಹಾರ ಅತ್ಯವಶ್ಯಕವಾಗಿದೆ. ಅದಿಲ್ಲದೇ ಜೀವಂತಿಕೆಯು ನಶಿಸಿ ಹೋಗುತ್ತದೆ. ಆಹಾರ ಸೇವನೆಯಲ್ಲಿ ಮೂರು ಬಗೆಯನ್ನು ಕಾಣುತ್ತೇವೆ. ಪೂರ್ಣ ಸಸ್ಯಹಾರ, ಪೂರ್ಣ ಮಾಂಸಹಾರ, ಸಸ್ಯ ಮತ್ತು ಮಾಂಸ ಮಿಶ್ರ ಆಹಾರ ಪದ್ಧತಿಗಳನ್ನು ಕಾಣುತ್ತೇವೆ. ಮನುಷ್ಯನೂ ಒಂದು ಪ್ರಾಣಿಯಾಗಿದ್ದು, ಸುಸಂಸ್ಕೃತನಾದ ಕಾರಣ, ಹಲವು ಬಗೆಯಲ್ಲಿ ಆಹಾರಗಳು ಅವಿಷ್ಕಾರಗೊಂಡಿವೆ. ಸೇವನೆಗೆ ಬಳಸಬಹುದಾದ, ಬಳಸಲು ಬಾರದ ಆಹಾರ ವಸ್ತುಗಳ ಜ್ಞಾನವನ್ನು ಹೊಂದಿದ್ದಾನೆ. ಅದರಂತೆಯೇ ಬುದ್ಧಿಯಿರದ ಜೀವಿಗಳೂ ಕೂಡಾ, ಯಾವುದನ್ನು ತಿನ್ನಬಾರದು, ತಿನ್ನಬೇಕು ಎಂಬ ಜ್ಞಾನ ನೈಸರ್ಗಿಕವಾಗಿ ಬಂದಿರುತ್ತದೆ.

ಇದೊಂದು ನಂಬಿಕೆಯನ್ನು ಸತ್ಯವೆಂದು ನಂಬಿರುವವರು ಹೆಚ್ಚು. ಅದರ ಬಗೆಗೆ ಓದಿ ತಿಳಿದುಕೊಳ್ಳದಿರುವುದು, ತಜ್ಞರ ಬಳಿ ಕೇಳಿ,ವೈದ್ಯಕೀಯ ಸಲಹೆಗಳನ್ನು ಪಡೆಯದಿರುವುದು ನಮ್ಮಲ್ಲಿನ ದೋಷಗಳು. ಯಾರೋ ಬಿತ್ತಿದ ಅವೈಜ್ಞಾನಿಕ ಅಂಶಗಳನ್ನು ನಂಬಿ ಬಿಡುವ ನಾವು, ಸತ್ಯಾಸತ್ಯತೆಗಳನ್ನು ಅರಿಯುವಲ್ಲಿ ಎಡವಿ ಬಿಡುತ್ತೇವೆ. ಮಾಂಸಹಾರಿಗಳು ಬಲಶಾಲಿಗಳು. ಅವುಗಳ ಸಾಮರ್ಥ್ಯ ಸಸ್ಯಹಾರಿಗಳಿಗಿಂತ ಹೆಚ್ಚು ಎಂಬುದಾಗಿ ಮಾತಾಡುವುದನ್ನು ನೋಡಿದ್ದೇನೆ. ಆದರೆ ಅದೇ ಸತ್ಯವಲ್ಲ. ಅವು ತಂತ್ರಗಾರಿಕೆಯನ್ನು ಬಳಸಿ, ವಿಜಯಶಾಲಿಗಳಾಗುತ್ತವೆಯೇ ಹೊರತು, ಸ್ನಾಯು ಬಲದಿಂದ ಅಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು.

ಪೂರ್ಣ ಪ್ರಮಾಣದ ಸಸ್ಯಹಾರಿ ಜೀವಿಗಳು, ಅತೀ ಹೆಚ್ಚಿನ ಶಕ್ತಿ ಸಾಮರ್ಥ್ಯ ಹೊಂದಿರುತ್ತವೆ ಎಂಬುದನ್ನು ಮನಗಂಡಿದ್ದೇವೆ. ಆನೆ, ಎತ್ತು, ಕೋಣ, ಕತ್ತೆ,ಕುದುರೆ, ಒಂಟೆ, ಜಿರಾಫೆ, ಜಿಂಕೆಗಳು ಮತ್ತು ಚಿಕ್ಕ ಪ್ರಾಣಿಯಾದರೂ ಅಧಿಕ ಸ್ನಾಯು ಬಲ ಹೊಂದಿದ ಮೊಲ ಇವುಗಳನ್ನು ಉದಾಹರಿಸಬಹುದಾಗಿದೆ.

ಎಲ್ಲ ಸಸ್ಯಹಾರಿ ಜೀವಿಗಳು ಹಲವು ವೈಶಿಷ್ಟ್ಯತೆಗಳಿಗೆ ಹೆಸರಾಗಿವೆ. ಅವುಗಳ ಆಹಾರ ಸಸ್ಯ ಮತ್ತು ಸಸ್ಯ ಮೂಲಗಳು. ಅವುಗಳಿಗೆ ಯಥೇಚ್ಛವಾಗಿ ಪ್ರೋಟೀನ್, ವಿಟಮಿನ್, ಕಾರ್ಬೋಹೈಡ್ರೇಟ್, ಫ್ಯಾಟ್ ಹಾಗೂ ಮಿನರಲ್ಸ್ ಗಳು ದೊರೆಯುತ್ತವೆ. ಅವುಗಳ ಸ್ವಾಭಾವವೂ ಶಾಂತ, ಮೃದು ಹಾಗೂ ಸಮ ಚಿತ್ತತೆಗೂ ಕಾರಣವಾಗುತ್ತದೆ ಎಂಬುದನ್ನು ಮನಗಾಣಬಹುದು. ( ಹಾಗೆಂದ ಮಾತ್ರಕ್ಕೆ ಮಾಂಸಾಹಾರಿಗಳೆಲ್ಲ ಮೇಲೆ ಕಾಣಿಸಿದ ಅಂಶಕ್ಕೆ ವಿರುದ್ಧವೆಂದು ಭಾವಿಸಬಾರದು.) ಮಾಂಸದಲ್ಲಿ ಇಲ್ಲವೆಂದಲ್ಲ. ಫ್ಯಾಟ್ ನ ಪ್ರಮಾಣ ಅಧಿಕ. ಮಾಂಸಾಹಾರಿ ಜೀವಿಗಳು ಅತ್ಯಂತ ಕ್ರೂರವಾಗಿರುತ್ತವೆ. ಅವುಗಳ ಹಾವ ಭಾವ ಭಯಾನಕವೇ! ಸಿಂಹ,ಹುಲಿ, ಚಿರತೆ, ತೋಳ,ಕಾಡುನಾಯಿ ಅಷ್ಟೇ ಏಕೆ ? ಬೆಕ್ಕುಗಳ ಕಣ್ಣುಗಳನ್ನು ನೋಡಿದಾಗ ಭಯವಾಗುತ್ತದೆ. ಸಹಜವಾಗಿ ಉಗ್ರ ಸ್ವರೂಪದ ಲಕ್ಷಣಗಳನ್ನು ಹೊರ ಹೊಮಿಸುತ್ತವೆ. ಈ ವಿಷಯದಲ್ಲಿ ಮನುಷ್ಯ ಮಾತ್ರ ಭಿನ್ನ. ಕಾರಣ, ನಾಗರಿಕತೆ, ಸಂಸ್ಕೃತಿ, ಕಾನೂನಿನ ನಿಯಂತ್ರಣ ಹೆಚ್ಚಾಗಿ ಕೌಟುಂಬಿಕ ವ್ಯವಸ್ಥೆ, ಮೃದುವಾಗಿರಲು ದಾರಿ ಮಾಡಿದೆ.

ಮೃದು ಮನದ ಪ್ರಾಣಿಗಳ ಕ್ರೋಧಕ್ಕೆ ಹಲವು ಕಾರಣಗಳನ್ನು ಕೊಡಬಹುದು. ಅವುಗಳ ಪಾಡಿಗೆ ಅವುಗಳನ್ನು ಬಿಡದಿರುವುದು, ಮರಿಗಳ ಬಗೆಗೆ ಅಸುರಕ್ಷಿತ ಭಾವನೆ ಮೂಡಿದಾಗ, ಸುಖಾಸುಮ್ಮನೆ ಕೆಣಕುವುದು, ತೊಂದರೆ ಕೊಡುವುದು, ಅವುಗಳ ಆವಾಸ ಸ್ಥಾನದಲ್ಲಿ ಬೀಡು ಬಿಡುವುದು ಇಲ್ಲವೇ ಅವುಗಳಿಗೆ ತಮ್ಮ ಪ್ರಾಣಕ್ಕೆ ಕುತ್ತು ಬರುತ್ತದೆಂಬ ಭಾವನೆ ಮೂಡಿದಾಗಲಷ್ಟೇ ಅವು ಕೆರಳುತ್ತವೆಯೇ ವಿನಃ, ತಾವಾಗಿಯೇ ಎಂದೂ ಆಕ್ರಮಣವೆಸಗುವುದಿಲ್ಲ. ಹಾಗಾಗಿ ಮೃದು ಮನಸ್ಸಿನ ಜೀವಿಗಳು ಸಹನಾಶೀಲತೆಯು ಬಹು ಪಾಲು ಸಸ್ಯದ ಕೊಡುಗೆಯೆಂದು ಘಂಟಾಘೋಷವಾಗಿ ಹೇಳಬಹುದು.

ಎತ್ತು ಬರೀ ಸೊಪ್ಪುಗಳು, ಹುಲ್ಲು,ಒಣ ಹುಲ್ಲು, ಹಿಂಡಿ, ಬೇಳೆ ಕಾಳುಗಳನ್ನು ತಿನ್ನುವ ಅದು ಸಾವಿರಾರು ಕಿಲೋ ಗ್ರಾಂಗಳ ತೂಕವನ್ನು ಎಷ್ಟು ದೂರಕ್ಕೆ ಬೇಕಾದರೂ ಎಳೆದೊಯ್ಯಬಲ್ಲವು. ಅವು ಕೃಷಿಕನ ನಿಜ ಗೆಳೆಯರು. ಅವುಗಳ ಸಾಮರ್ಥ್ಯಕ್ಕೆ ಯಾವ ಮಾಂಸಾಹಾರಿಗಳು ಸಮವಾಗಲಾರವು.

ಸಸ್ಯ ಮತ್ತು ಸಸ್ಯಜನ್ಯವೊಂದನ್ನೇ ಸೇವಿಸುವ ಆನೆಯ ಬಲವನ್ನು ಲೆಕ್ಕಾಚಾರ ಮಾಡಿದಾಗ, ಅದು ಎರೆಡೂವರೆ ಟನ್ ಗೂ ಹೆಚ್ಚು ತೂಗಬಲ್ಲದು. ಅತೀ ಬಲಶಾಲಿ ಎಂದು ಭಾವಿಸುವ ಸಿಂಹ (ಭಾರತ)ಕೇವಲ 160 ರಿಂದ 190 ಕಿ ಗ್ರಾಂ ತೂಗುತ್ತದೆ ಅಷ್ಟೇ. ಆಫ್ರಿಕಾದ ಸಿಂಹಗಳು 200 ಕಿ ಗ್ರಾಂ ಗಳಿಗಿಂತಲೂ ಹೆಚ್ಚು ತೂಕವಿರುತ್ತದೆ.ಯಾವ ಪ್ರಾಣಿಯನ್ನು ಉಪಮಾನ, ಉಪಮೇಯಗಳಿಂದ ವನರಾಜನೆಂದು ಬಣ್ಣಿಸುತ್ತೇವೆಯೋ ಆ ಪ್ರಾಣಿ ಅರ್ಥಾತ್ ಸಿಂಹ, ಆನೆಯ ಎದುರಿನಿಂದ ಬಂದಿದ್ದೇ ಆದರೆ ಅದು ಇಲಿಗೆ ಸಮನಾಗಿ ಬಿಡುತ್ತದೆ. ಕೇವಲ ಆನೆ ತನ್ನ ಸೊಂಡಿಲಿನಿಂದ ಬಡಿದರೆ, ಹತ್ತಾರು ಅಡಿ ದೂರಕ್ಕೆ ಹೋಗಿ ಬೀಳುತ್ತದೆ. ಕಾಲಿನಿಂದ ತುಳಿದರೆ, ಸಿಂಹ ಮತ್ತೆಂದೂ ಮೇಲೇಳಲಿಕ್ಕಿಲ್ಲ. ಉದ್ದನೆಯ ದಂತಗಳಿಂದ ತಿವಿದರೆ, ಸಿಂಹದ ಕರುಳು ಹೊರ ಬಂದೀತು! ಅವು ಭಾರವಾದ ಮರದ ದಿಮ್ಮಿಗಳನ್ನು ಸೊಂಡಿಲು ಮತ್ತು ದಂತಗಳೆರೆಡರ ಸಹಾಯದಿಂದ ಎತ್ತಿ ಒಯ್ಯಬಲ್ಲವು. ಒಂದೇ ಸಿಂಹದಿಂದ ಬೃಹತ್‌ ಗಾತ್ರದ ಆನೆಯೊಂದನ್ನು ಕೊಲ್ಲಲು ಅಸಾಧ್ಯ ಕಾರ್ಯ. ನಾಲ್ಕಾರು ಸಿಂಹಗಳು (ಕುಟುಂಬ ಸಮೇತ) ಒಟ್ಟಾಗಿ ಹಿಂದಿನಿಂದ ಎರಗುತ್ತವೆ. ಒಂದು ಮೇಲೆ ಹತ್ತಿ ಕಿವಿಯ ಸೂಕ್ಷ್ಮ ಭಾಗವನ್ನು ಪಂಜರಗಳಿಂದ ಹರಿದರೆ, ಮತ್ತೊಂದು ಬಾಲದ ಬಳಿಯ ಮೃದು ಗುದ ದ್ವಾರದ ಬಳಿ, ಪಂಜರದಿಂದ ಗಾಯಗೊಳಿಸಿ, ನೋವು, ಯಮ ಯಾತನೆಯನ್ನು ನೀಡಿ, ನೆಲಕ್ಕೆ ಬೀಳಿಸುವ ತಂತ್ರಗಳನ್ನು ಬಳಸುತ್ತವೆ. ಇಲ್ಲಿ ಶಕ್ತಿಗಿಂತ ಯುಕ್ತಿಯೇ ಹೆಚ್ಚು ಸಹಕಾರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಸಿಂಹಕ್ಕೆ ಯುಕ್ತಿಯ ಕೊರತೆಯಿದ್ದಲ್ಲಿ, ಕಾಡಿನ ರಾಜ ಆನೆಯೇ ಆಗಿರುತಿತ್ತು ಎಂಬುದನ್ನು ಮರೆಯುವಂತಿಲ್ಲ.

ಖಡ್ಗ ಮೃಗವೊಂದು 8.000 ಪೌಂಡ್ ತೂಕ ಹೊಂದಿರುತ್ತದೆ. ಅವುಗಳ ಒಂದು ಕೊಂಬು, ಎದುರಾಳಿಯನ್ನು ಮುಗಿಸುತ್ತದೆ. ಅದು ಪೂರ್ಣ ಸಸ್ಯಹಾರಿ. ಒಂದೂವರೆ ಇಂಚಿನಷ್ಟು ದಪ್ಪ ಚರ್ಮವಿದ್ದು, ಅದರಡಿಯಲ್ಲಿ ಅಗಾಧ ಪ್ರಮಾಣದ ಕೊಬ್ಬು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.

ಕಾಡು ಕೋಣ ಬಲದಲ್ಲಿ ಕಡಿಮೆಯೇನಿಲ್ಲ. ಅದರ ತೂಕ 50 ಪೌಂಡ್ ಗಳಷ್ಟು ಇರನಲ್ಲದು. ಅದು ತನ್ನನ್ನು ಅನಾಯಾಸವಾಗಿ ಕೊಲ್ಲ ಬರುವ ಸಿಂಹವನ್ನು, ಮೊನಾಚಾದ ಕೊಂಬುಗಳ ಸಹಾಯದಿಂದ ತಿವಿದು ಗಾಯಗೊಳಿಸಬಲ್ಲುದು. ಮುದಿ ಸಿಂಹವನ್ನಂತೂ ಗಾಳಿಯಲ್ಲಿ ತೂರಿ ಬಿಡಬಲ್ಲದು. ಅದು ಸಸ್ಯಹಾರಿಯೆಂಬುದನ್ನು ಗಮನಿಸಿ. ಜಿಂಕೆಗಳು, ಮೊಲಗಳು, ಕುದುರೆಗಳು, ಜಿರಾಫೆಗಳು ಓಟದಲ್ಲಿ ಸ್ನಾಯುಗಳ ಸಾಮರ್ಥ್ಯಕ್ಕೆ ಎಣೆಯೇ ಇಲ್ಲ. ಕತ್ತೆ,ಕುದುರೆ, ಜಿರಾಫೆಗಳ ಒದೆತ ಎಷ್ಟೆಂದರೆ ಮುಖಕ್ಕೆ ಬಿದ್ದರಂತೂ ಹಲ್ಲುಗಳು ಬಿಚ್ಚಿಹೋದಾವು. ಪುಟ್ಟ ಜೀವಿ ಮೊಲವೊಂದು ಅತೀ ವೇಗವಾಗಿ ಓಡಬಲ್ಲ ಚಿರತೆಯನ್ನು ಒಂದು ಇಲ್ಲವೇ ಎರೆಡು ಕಿಲೋ ಮಿಟರ್ ಗಳ ತನಕ ಓಡಿಸಿ, ಕಡೆಗೆ ಸಿಗಬಹುದು ಇಲ್ಲವೇ ಬಿಲದೊಳಡಗಿ ರಕ್ಷಿಸಿಕೊಳ್ಳಬಲ್ಲದು. ಜಿಂಕೆಗಳು ಹೆಣ್ಣು ಸಿಂಹ ಮತ್ತು ಹುಲಿಗಳಿಗೆ ಸಿಗಬಹುದು. ಕಾರಣ ಅವುಗಳ ದೇಹ ರಚನೆ ಓಟಕ್ಕೆ ಸಹಾಯಕವಾಗುತ್ತದೆ. ಗಂಡಿಗಿಂತ ಹೆಣ್ಣು ತೂಕದಲ್ಲಿ ಕಡಿಮೆಯಿರುತ್ತದೆ. ಗಂಡು ಓಡುವಲ್ಲಿ ಬೇಗನೇ ಆಯಾಸಗೊಳ್ಳುತ್ತವೆ.

ಈ ಎಲ್ಲ ವಿವರಣೆಯ ಉದ್ದೇಶವಿಷ್ಟೇ. ಕೇವಲ ಮಾಂಸಹಾರ ಒಂದರಿಂದಲೇ ಶಕ್ತಿಯ ವರ್ಧನೆಯಾಗುತ್ತದೆಯೆಂಬ ನಂಬಿಕೆ ಸತ್ಯಕ್ಕೆ ದೂರವಾಗಿದೆ ಎಂಬುದನ್ನು ತಿಳಿಸಲೋಸುಗ. ಆಹಾರ ಸೇವನೆ, ಆಯಾ ಜಾತಿಯ ಪ್ರಾಣಿಗಳ ಜೀರ್ಣಕ್ರಿಯೆಯ ಮೇಲೆ ಅವಲಂಬಿತವಾಗಿದೆ. ಮತ್ತು ಕಾಡಿನಲ್ಲಿ ಅವುಗಳಿಗೆ ದೊರೆಯಬಹುದಾದ ಆಹಾರ ಮೂಲಗಳ ಲಭ್ಯತೆ ಅಭ್ಯಾಸ ಇಲ್ಲವೇ ರೂಢಿಯೂ ಕಾರಣವಾಗುತ್ತದೆ. ಕೆಲವು ಜೀವಿಗಳ ಪಚನ ಕ್ರಿಯೆ ವಿಚಿತ್ರವೇ ಆಗಿರುತ್ತದೆ. ಹಲ್ಲುಗಳ ರಚನೆಯೂ ತುಂಡರಸಿ,ಅಗೆದು, ನುಂಗಲು ಸಹಾಯಕವಾಗಬಹುದಾದ ರೀತಿಯೂ ವಿಭಿನ್ನ. ಮಾಂಸಾಹಾರಿಗಳಿಗೆ ದಿನ ನಿತ್ಯ ಬೇಕೆಂದೇನೂ ಇಲ್ಲ. ನೀರಿನ ಮೇಲೊಂದೇ ಮೂರು ನಾಲ್ಕು ದಿನಗಳವರೆಗೂ ಆಹಾರವಿಲ್ಲದೇ ಇರಬಲ್ಲವು. ಅವುಗಳ ಜೀರ್ಣಕ್ರಿಯೆ ನಿಧಾನವಾಗಿಯೂ ಇರುತ್ತದೆ. ಹಸಿವಿನ ಬಾಧೆ ದಿನಂ ಪ್ರತಿ ಇರದು. ಆದರೆ ಸಸ್ಯಹಾರವು ಮೃದುವಾಗಿಯೂ, ತಿಳಿಯಾಗಿಯೂ ಇರುವುದರಿಂದ ಶೀಘ್ರವಾಗಿ ಪಚನವಾಗಿ ಬಿಡುತ್ತದೆ. ಹಾಗಾಗಿಯೇ ದಿನ ನಿತ್ಯ ಸೇವನೆಯಲ್ಲಿ ತೊಡಗಲೇ ಬೇಕು. ಬೇಳೆ ಕಾಳುಗಳು, ಹಣ್ಣು-ಹಂಪಲುಗಳು, ತರಕಾರಿಗಳು, ಎಲೆಗಳು ಹೆಜ್ಜೆಂದರೆ ನಾಲ್ಕು- ಐದು ಗಂಟೆಯೊಳಗೆ ಜೀರ್ಣವಾಗುತ್ತವೆ.

ಮಾನವ ಕುರಿ, ಕೋಳಿ, ಮೀನು ಇವುಗಳನ್ನು ಸೇವನೆಯನ್ನು ಮಾಡುತ್ತಾನೆ. ಅವುಗಳನ್ನು ಆಹಾರವೆಂದು ಪರಿಗಣಿಸಲಾಗುತ್ತದೆ. ಅವುಗಳ ವಧೆಯೂ, ಕಾನೂನಿನಲ್ಲಿ ಸಮ್ಮತವೇ ಆಗಿದೆ. ಆದರೆ ದೇವರ ಹೆಸರಲ್ಲಿ ಕಾಡು ಕೋಣಗಳ ವಧೆ ಶಿಕ್ಷಾರ್ಹವಾಗಿದೆ. ಅದು ನಿಷಿದ್ದ. ಕೆಲವು ಸಮುದಾಯಗಳಲ್ಲಿ ಹಸು, ಎತ್ತು, ಒಂಟೆಗಳ ಮಾಂಸ ಸೇವನೆಯಿದೆ. ಇದು ತೀರಾ ಅಮಾನವೀಯ. ಅದು ಸಾಲದೆಂಬಂತೆ ನಾಯಿ,ಕಾಡು ಹಂದಿ, ಮೊಲಗಳನ್ನು ಬಿಟ್ಟಿಲ್ಲ. ಇನ್ನು ಜಿಂಕೆಗಳ ಬೇಟೆ ನಿಷೇಧವಿದ್ದಾಗಲೂ, ಮಾಂಸಕ್ಕಾಗಿ, ಚರ್ಮಕ್ಕಾಗಿ, ಸದ್ದಿಲ್ಲದೇ ಶಿಕಾರಿ ಮಾಡಿದವರನ್ನು ಹೆಡೆಮುರಿ ಕಟ್ಟಿ, ಶಿಕ್ಷೆಗೊಳಪಡಿಸಿದ್ದು ಇದೆ. ರಾಷ್ಟ್ರಪಕ್ಷಿ ನವಿಲಿನ ಬೇಟೆ ಕಟ್ಟು ನಿಟ್ಟಾಗಿ ನಿಷೇಧವಿದೆ. ಕದ್ದು ಮುಚ್ಚಿ ಮುದ್ದಾದ ಪಕ್ಷಿಗಳ ಎಣ್ಣೆಗಾಗಿ ಬೇಟೆಯಾಡುವವರೂ ಇಲ್ಲವೆಂದಲ್ಲ. ಆದರೆ ಜನತೆ ಮಾಹಿತಿ ನೀಡುವುದಿಲ್ಲ. ರಕ್ಷಿಸುವುದರೊಂದಿಗೆ ತಾವೂ ಪಾಲು ಪಡೆದಿರುತ್ತಾರೆ ಎಂಬ ಮಾತಿದೆ. ವೀರಪ್ಪನ್ ಕಾಡಿನಲ್ಲಿ ನವಿಲು ಹೊಡೆಯುತ್ತಿದ್ದ ಎಂಬೆಲ್ಲ ಕಥೆಗಳು ಇದ್ದವು. ಸ್ಪಷ್ಟ ಸಾಕ್ಷಿಗಳಿಲ್ಲ. ಇತ್ತೀಚೆಗೆ ಕೇಳಿದ ಕಥೆ. ನನಗೆ ಸತ್ಯಾಸತ್ಯತೆ ಗೊತ್ತಿಲ್ಲ. ನಾಯಿಯ ಮಾಂಸ ತಿಂದರೆ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ ಎಂಬುದು ಚೀನಾದಿಂದ ಬಂದ ವಿಷಯ ಎಂದು ಕೇಳಿದ್ದೇನೆ. ಇದು ನಿಜವೇ ಆಗಿದ್ದರೆ ಶುದ್ದ ತಪ್ಪು ಗ್ರಹಿಕೆ. ಒಂದಕ್ಕೊಂದು ಸಂಬಂಧವಿರದ ಕಲ್ಪನೆ. ನಂಬಲೇಬಾರದು.

ಭೂಮಿಯಲ್ಲಿ ಬದುಕುವ ಹಕ್ಕು ಪ್ರತಿ ಜೀವಿಗೂ ಇದೆ ಎಂದು ಹೇಳುವ ಸಂವಿಧಾನಗಳು, ತಿನ್ನಲೆಂದೇ ಕೆಲವು ಜೀವಿಗಳನ್ನು ಮೀಸಲಿರಿಸಿದ್ದು ಕುರಿ, ಕೋಳಿ, ಮೀನು ಇತರೆ ಜೀವಿಗಳು ಚರ್ಚಾಸ್ಪದವಾಗಿದೆ. ಪ್ರಕೃತಿಯಲ್ಲಿ ಆಹಾರ ಸರಪಳಿ ಒಂದು ಮತ್ತೊಂದರ ನಿಯಂತ್ರಣದ ಕೃತಿಯಾಗಿದೆ ಎಂಬುದು ಜೀವಶಾಸ್ತ್ರ ವಿಜ್ಞಾನಿಗಳ ಅಭಿಮತ. ಅದರಲ್ಲಿ ದೋಷವಿಲ್ಲ ಎಂದೂ ಸಾರಿದ್ದಾರೆ. ಅದು ಒಪ್ಪುವ ಮಾತೇ. ಆದರೆ ಅಳಿವಿನಂಚಿನ ಜೀವರಾಶಿಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಟೀಮ್ ಸಮಾವೇಶ; ಡಬಲ್ ಗಿಫ್ಟ್ ಕೊಡ್ತಾರಾ ಮಾಜಿ ಸಚಿವ?

https://pragati.taskdun.com/said-i-would-give-a-double-gift-but-in-the-end-i-will-give-it-once-ramesh-jarakiholi/

ಭೀಕರ ಅಪಘಾತ ಪಾದಚಾರಿ ದಾರುಣ ಸಾವು

https://pragati.taskdun.com/man-died-in-accident-in-belagavi/

ನಿವೃತ್ತ ಅಧಿಕಾರಿಯ ಮನೆಯಲ್ಲಿ ಕೋಟ್ಯಾಂತರ ಮೌಲ್ಯದ ಚಿನ್ನ, ನಗದು ಪತ್ತೆ

https://pragati.taskdun.com/17-kg-gold-and-1-57-cr-cash-found-in-retired-railway-officers-house-among-cbi-ride/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button