CrimeKannada NewsKarnataka NewsLatest
*ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಅವಘಡ*: *LED ಕಮಾನು ಮುರಿದು ವೃದ್ಧನಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಡಿಜೆಗೆ ಅಳವಡಿಸಿದ್ದ LED ಕಮಾನು ಏಕಾಏಕಿ ಮುರಿದುಬಿದ್ದು ವೃದ್ಧರೊಬ್ಬರು ಗಾಯಗೊಂಡ ಘಟನೆ ನಡೆದಿದೆ. ಕಮಾನು ಮುರಿದು ಬೀಳುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗಾಯಗೊಂಡ ವೃದ್ಧರನ್ನು ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದೆ. ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ.
ಶೋಭಾಯಾತ್ರೆ ಸಾಗುತ್ತಿದ್ದ ವೇಳೆ LED ಕಮಾನು ಮೇಲೆ ಹತ್ತಾರು ಯುವಕರು ಕುಳಿತಿದ್ದರು. ಈ ವೇಳೆ ಹೆಚ್ಚಿನ ಭಾರದಿಂದ ಕಮಾನು ಮುರಿದು ಬಿದ್ದಿದೆ. ಕಮಾನು ಮುರಿದು ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸಾರ್ವಜನಿಕರು ಗಾಯಗೊಂಡ ಸಿದ್ದಲಿಂಗಪ್ಪ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಮಾನು ಮುರಿದು ಬೀಳುವ ಕ್ಷಣ ದೃಶ್ಯದಲ್ಲಿ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




