
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಮೋದಗಾ ಗ್ರಾಮದ ಬಸವನಗಲ್ಲಿಯಲ್ಲಿ ವಾಸವಾಗಿದ್ದ 19 ವರ್ಷದ ಅನ್ನಪೂರ್ಣ ಶಿವಾನಂದ ದಾನೋಜಿ ಎಂಬ ಯುವತಿಯು ಕಾಣೆಯಾಗಿದ್ದಾಳೆ.
ಈ ಬಗ್ಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಯುವತಿ 5 ಅಡಿ ಎತ್ತರ, ದುಂಡು ಮುಖ, ನೇರ ಮೂಗು, ಸಾದಾರಣ ಮೈಕಟ್ಟು, ಗೋಧಿಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ, ಮರಾಠಿ, ಹಿಂದಿ ಭಾಷೆ ಬಲ್ಲವಳಾಗಿದ್ದಾಳೆ. ಚೂಡಿದಾರ ಧರಿಸಿರುತ್ತಾಳೆ.
ಕಾಣೆಯಾದ ಯುವತಿ ಬಗ್ಗೆ ಮಾಹಿತಿ ದೊರೆತಲ್ಲಿ ಮಾರಿಹಾಳ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರನ್ನು ಅಥವಾ ಕಛೇರಿ ದೂರವಾಣಿ ಸಂಖ್ಯೆ: 9480804111, 9620236343 ಗೆ ಸಂಪರ್ಕಿಸಬಹುದಾಗಿದೆ. ಈ ಕುರಿತು ಮಾರಿಹಾಳ ಪೋಲಿಸ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.