Kannada NewsKarnataka News

ಯುವತಿ ಕಾಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕುಮಾರಿ ಅಪ್ಸಾನ ವಯಸ್ಸು ೧೭ ವರ್ಷ ಇವಳು ಆಗಸ್ಟ್ ೧ ರಂದು ಗೋವಾದ ಮಡಗಾಂವ ರೈಲು ನಿಲ್ದಾಣದಿಂದ ಹಾವೇರಿಗೆ ಹೋಗುವಾಗ ರಾತ್ರಿ ೧೧.೧೦ ಗಂಟೆಗೆ ರೈಲಿನಲ್ಲಿ ಲೋಂಡಾ ಬಳಿ ಕಾಣೆಯಾಗಿದ್ದಾಳೆ.
ಈ ಕುರಿತು ಆಗಸ್ಟ್ ೫ರಂದು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರನ್ನು ಅವರ ತಂದೆ ಮುಸ್ತಾಕ್ ಅಹ್ಮದ್ ಪಟಾನ್ ದಾಖಲಿಸಿದ್ದು ಬೆಳಗಾವಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಾಣೆಯಾದ ಯುವತಿಯ ಹೆಸರು ಆಪ್ಸಾನ ಆಗಿದ್ದು, (೧೭ವರ್ಷ) ಸುಮಾರು ಐದು ಅಡಿ ಎತ್ತರ ಸಾಧಾರಣ ಮೈಬಣ್ಣ ನೀಟಾದ ಮೂಗು, ಕೋಲುಮುಖ ಹೊಂದಿದ್ದು, ಗುಲಾಬಿ ಬಣ್ಣದ ಚೂಡಿದಾರ್ ಹಾಗೂ ಕೆಂಪು ಬಣ್ಣದ ಪ್ಯಾಂಟನ್ನು ಧರಿಸಿದ್ದಾಳೆ. ಯುವತಿಯು ಹಿಂದಿ-ಉರ್ದು ಮತ್ತು ಕೊಂಕಣಿ ಭಾಷೆಯನ್ನು ಮಾತನಾಡುತ್ತಾಳೆ.

Home add -Advt

ಕಾಣೆಯಾದ ಬಾಲಕಿಯ ಈ ಚಹರೆ ಪಟ್ಟಿ ಹೋಲುವ ಬಾಲಕಿಯ ಬಗ್ಗೆ ತಮ್ಮಲ್ಲಿ ಯಾವುದಾದರೂ ಮಾಹಿತಿ ಕಂಡುಬಂದಲ್ಲಿ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ (೦೮೩೧-೨೪೦೫೨೭೩) ೯೪೮೦೮೦೨೧೨೭ ಅಥವಾ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ ೦೮೦-೨೨೮೭೧೨೯೧ ಸಂಖ್ಯೆಗೆ ಸಂಪರ್ಕಿಸಲು ರೈಲ್ವೆ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಮುಖಂಡ ಹಾಗೂ ಪತ್ನಿಯ ಬರ್ಬರ ಹತ್ಯೆ

Related Articles

Back to top button