
ಪ್ರಗತಿವಾಹಿನಿ ಸುದ್ದಿ: ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿರುವ ಘಟನೆ ಮೈಸೂರಿನ ನಾಡಹಳ್ಳಿ ಬಳಿ ನಡೆದಿದೆ.
ಚುನಾವಣಾ ಪ್ರಚಾರ ಕೆಲಸ ಮುಗಿಸಿ ಕೊಳ್ಳೆಗಾಲಕ್ಕೆ ವಾಪಾಸ್ ಆಗುತ್ತಿದ್ದಾಗ ತಡ ರಾತ್ರಿ ಏಕಾಏಕಿ ಶಾಸಕರ ಕಾರಿನ ಟೈರ್ ಸ್ಫೋಟಗೊಂಡು ಕಾರು ಅಪಘಾತ ಸಂಭವಿಸಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ಶಾಸಕ ಎ.ಆರ್.ಕೃಷ್ಣಮೂರ್ತಿ ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ