Kannada NewsKarnataka News

ಶಾಸಕ ಅಭಯ ಪಾಟೀಲ ಅವರಿಗೆ ಕಾಮನ್ ಸೆನ್ಸ್ ಇಲ್ವಾ?- ಪಾಲಿಕೆ ಆರೋಗ್ಯಾಧಿಕಾರಿಯ ಹೇಳಿಕೆ ನೋಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರಿಗೆ ಕಾಮನ್ ಸೆನ್ಸ್ ಇಲ್ವಾ?

ಸಂಜಯ ಡುಮ್ಮಗೋಳ ಅವರು ಬೇರೊಂದು ವೆಬ್ ಸೈಟ್ ಗೆ ನೀಡಿರುವ ಹೇಳಿಕೆ

ಬೆಳಗಾವಿ ಮಹಾನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಅವರ ಹೇಳಿಕೆಯನ್ನು ಗಮನಿಸಿದರೆ,  ಅಭಯ ಪಾಟೀಲ ಅವರಿಗೆ ಕಾಮನ್ ಸೆನ್ಸ್ ಇಲ್ಲ ಎನ್ನುವಂತಿದೆ.

ಬೆಳಗಾವಿ ಮಹಾನಗರದ ಸ್ವಚ್ಛತೆ ನನಗೆ ಸಂಬಂಧಿಸಿದ್ದಲ್ಲ, ಅನಗತ್ಯವಾಗಿ ನನ್ನನ್ನು ಹೊಣೆ ಮಾಡಲಾಗುತ್ತಿದೆ ಎಂದು ಸಂಜಯ ಡುಮ್ಮಗೋಳ ಹೇಳಿದ್ದಾರೆ ಎಂದು ಖಾಸಗಿ ವೆಬ್ಸೈಟ್ ಒಂದು ವರದಿ ಮಾಡಿದೆ.

ಪ್ರಗತಿವಾಹಿನಿಯಲ್ಲಿ ಪ್ರಕಟವಾಗಿರುವ ಆರೋಗ್ಯಾಧಿಕಾರಿ ಬೇಜವಾಬ್ದಾರಿ: ಬಲಿಪಶುವಾದ ಕಮಿಶನರ್ ಸುದ್ದಿಗೆ ಸಂಜಯ ಡುಮ್ಮಗೋಳ ಅವರ ಪ್ರತಿಕ್ರಿಯೆ ಬೇರೆ ವೆಬ್ಸೈಟ್ ನಲ್ಲಿ ಪ್ರಕಟವಾಗಿದೆ.

ಕಸದ ಸಮಸ್ಯೆಗೆ ನನ್ನನ್ನು ಹೊಣೆ ಮಾಡುವುದು ತಪ್ಪು ಎಂದಿದ್ದಾರೆ. ಅದರ ನಿರ್ವಹಣೆಗೆ ಪಾಲಿಕೆಯಲ್ಲಿ ಪ್ರತ್ಯೇಕ ವಿಭಾಗವಿದೆ. ಮೂರು ಮಂದಿ ಪರಿಸರ ಅಭಿಯಂತರರು ಅದರ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಆರೋಗ್ಯಾಧಿಕಾರಿಯ ಜವಾಬ್ದಾರಿಗಳು ಬೇರೆ ಇರುತ್ತವೆ ಎಂದು ಹೇಳಿಕೆ ನೀಡಿದ್ದಾರೆ ಸಂಜಯ ಡುಮ್ಮಗೋಳ.

ಸಂಜಯ ಡುಮ್ಮಗೋಳ ಅವರ ಈ ಹೇಳಿಕೆಗೆ ಪಾಲಿಕೆ ಆಯುಕ್ತರ ಅಥವಾ ಪಾಲಿಕೆಯ ಆಡಳಿತಾಧಿಕಾರಿಯ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯ ಸಹಮತವಿದೆಯೇ ಎನ್ನುವ ಪ್ರಶ್ನೆಯನ್ನು ಮುಂದಿಡಬೇಕಾಗಿದೆ.

ಒಂದು ವೇಳೆ ಆರೋಗ್ಯಾಧಿಕಾರಿಗೆ ಕಸದ ವಿಷಯ ಸಂಬಂಧವಿಲ್ಲವೆಂದಾದರೆ 3 ಮಂದಿ ಪರಿಸರ ಅಭಿಯಂತರರು ಯಾರ ಕೆಳಗೆ ಕೆಲಸ ಮಾಡುತ್ತಾರೆ?

ಅವರೆಲ್ಲ ಆರೋಗ್ಯಾಧಿಕಾರಿಗೆ ಏಕೆ ವರದಿ ಮಾಡಿಕೊಳ್ಳುತ್ತಾರೆ?

ಪ್ರತಿ ತಿಂಗಳು ಪಾಲಿಕೆಯಿಂದ ಸ್ವಚ್ಛತೆಗಾಗಿ ಖರ್ಚು ಮಾಡಲಾಗುವ (ಪೌರಕಾರ್ಮಿಕರ ವೇತನ, ವಾಹನಗಳ ಬಾಡಿಗೆ, ಇಂಧನ ಇತ್ಯಾದಿ)  ಅಂದಾಜು 2.20 ಕೋಟಿ ರೂ.ಗಳ ಫೈಲ್ ಆರೋಗ್ಯಾಧಿಕಾರಿ ಮೂಲಕ ಆಯುಕ್ತರಿಗೆ ಏಕೆ ಹೋಗಬೇಕು? ಪರಿಸರ ಅಧಿಕಾರಿಗಳಿಂದ ನೇರವಾಗಿ ಫೈಲ್ ಆಯುಕ್ತರಿಗೆ ಏಕೆ ಹೋಗುವುದಿಲ್ಲ?

ಇದೆಲ್ಲಕ್ಕಿಂತ ಮುಖ್ಯವಾದ ಪ್ರಶ್ನೆ ಎಂದರೆ,  ಸಂಜಯ ಡುಮ್ಮಗೋಳ ಅವರ ಪ್ರಕಾರ 3 ಮಂದಿ ಪರಿಸರ ಅಭಿಯಂತರರು ಮಾತ್ರ ನಗರ ಅಸ್ವಚ್ಛತೆಗೆ ಜವಾಬ್ದಾರರು, ಅವರ ಇಮ್ಮಿಡಿಯೇಟ್ ಮೇಲಧಿಕಾರಿಯಾಗಿರುವ ಆರೋಗ್ಯಾಧಿಕಾರಿ ಇದಕ್ಕೆಲ್ಲ ಜವಾಬ್ದಾರರಲ್ಲ ಎಂದಾದರೆ ಅವರಿಗಿಂತ ಮೇಲಧಿಕಾರಿಯಾಗಿರುವ ಕಮಿಶನರ್ ಹೇಗೆ ಜವಾಬ್ದಾರರಾಗುತ್ತಾರೆ? ಶಾಸಕ ಅಭಯ ಪಾಟೀಲ ಕಮಿಶನರ್ ಮನೆಯ ಮುಂದೆ ಏಕೆ ಕಸ ಚೆಲ್ಲುತ್ತಾರೆ? ಅಭಯ ಪಾಟೀಲ ಅವರಿಗೆ ಅಷ್ಟೂ ಕಾಮನ್ ಸೆನ್ಸ್ ಇಲ್ಲವೆ ಹಾಗಾದರೆ? ಸಂಬಂಧವೇ ಇಲ್ಲದ ಅಧಿಕಾರಿಯ ಮನೆ ಮುಂದೆ ಕಸ ಚೆಲ್ಲಿ ಅವರಿಗೆ  ಅಭಯ ಪಾಟೀಲ ಮಾನಸಿಕ ಹಿಂಸೆ ನೀಡಿದರೇ?

ಇದಕ್ಕೆ ಪಾಲಿಕೆ ಆಯುಕ್ತರು, ಪಾಲಿಕೆ ಆಡಳಿತಾಧಿಕಾರಿಗಳು ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು, ಶಾಸಕ ಅಭಯ ಪಾಟೀಲ, ಸಾಧ್ಯವಾದರೆ ನಗರಾಭಿವೃದ್ಧಿ ಸಚಿವರೂ ಉತ್ತರ ನೀಡಬೇಕು.

ಒಂದು ವೇಳೆ ಸಂಜಯ ಡುಮ್ಮಗೋಳ ಹೇಳಿಕೆ ಸರಿ ಇದ್ದರೆ ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ಚೆಲ್ಲಿದ ಶಾಸಕ ಅಭಯ ಪಾಟೀಲ ತಪ್ಪಿತಸ್ಥರಾಗುತ್ತಾರೆ. ಒಂದು ವೇಳೆ, ನಗರದ ಕಸದ ಸಮಸ್ಯೆಗೆ ನನ್ನನ್ನು ಹೊಣೆ ಮಾಡುವುದು ತಪ್ಪು, ನನಗೆ ಇದು ಸಂಬಂಧವಿಲ್ಲ ಎನ್ನುವ ಸಂಜಯ ಡುಮ್ಮಗೋಳ ಹೇಳಿಕೆ ತಪ್ಪಾದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.

ಸಂಬಂಧಿಸಿದವರು ಸಾರ್ವಜನಿಕರಿಗೆೆ ಈ ವಿಷಯದಲ್ಲಿ ಸ್ಪಷ್ಟನೆ ನೀಡಲಿ.

ಆರೋಗ್ಯಾಧಿಕಾರಿ ಬೇಜವಾಬ್ದಾರಿ: ಬಲಿಪಶುವಾದ ಕಮಿಶನರ್

https://pragati.taskdun.com/belagavi-news/mla-abhay-patil-who-dumped-garbage-in-front-of-the-commissioners-house/

https://pragati.taskdun.com/belagavi-news/garbage-cleaned-infront-of-commissioners-house/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button