Kannada NewsKarnataka News

ಅತ್ತ ರಾಜಕೀಯ… ಇತ್ತ ಶ್ರಮದಾನ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಅತ್ತ ಬೆಂಗಳೂರಿನಲ್ಲಿ ಸರಕಾರ ಉಳಿಸಲು, ಉರುಳಿಸಲು ಕಸರತ್ತು ನಡೆದಿದ್ದರೆ ಇತ್ತ ಬೆಳಗಾವಿಯಲ್ಲಿ ಶಾಸಕ ಅಭಯ ಪಾಟೀಲ ತಮ್ಮ 12 ವರ್ಷಗಳ ಭಾನುವಾರದ ಶ್ರಮದಾನದಲ್ಲಿ ನಿರತರಾಗಿದ್ದಾರೆ.

ಅಭಯ ಪಾಟೀಲ ಯಾವುದೇ ರೆಸಾರ್ಟ್ ಗೆ ಹೋಗದೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅಧಿಕಾರಿಗಳೊಂದಿಗೆ ಸುತ್ತಿದ್ದಲ್ಲದೆ, ತಮ್ಮ ಸ್ನೇಹಿತರ ತಂಡದೊಂದಿಗೆ ಶ್ರಮದಾನದಲ್ಲಿ ಪಾಲ್ಗೊಂಡರು.

ಹಾಳಾದ ರಸ್ತೆ,  ಒಳಚರಂಡಿ, ಕಸ ವಿಲೇವಾರಿ,  ಸ್ವಚ್ಛತೆ, ಮುಂತಾದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತ,  ಹನ್ನೆರಡು ವರ್ಷಗಳ ಹಿಂದೆ ಬಾಗೇವಾಡಿ ಮತಕ್ಷೇತ್ರದ ಶಾಸಕರಾದಾಗಿನಿಂದ ರೂಢಿಸಿಕೊಂಡು ಬಂದಿರುವ ಸ್ವಚ್ಛತೆ ಮತ್ತು ಶ್ರಮದಾನ ಅಭಿಯಾನವನ್ನು ಅವರು ಮುಂದುವರಿಸಿದ್ದಾರೆ.

Home add -Advt

 

Related Articles

Back to top button