
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಡಿನಾಡು ಬೆಳಗಾವಿಯುಲ್ಲಿ ತಮ್ಮದೇ ಆದ ಕಾರ್ಯವೈಖರಿಯಿಂದ ಹೆಸರಾದ ಬಿಜೆಪಿ ಶಾಸಕ ಅಭಯ ಪಾಟೀಲರು ಸೈಕಲ್ ಏರಿ ಮತದಾರರ ಮನೆಯತ್ತ ಹೊರಟಿದ್ದಾರೆ.
ದಕ್ಷಿಣ ಕ್ಷೇತ್ರದಲ್ಲಿ ಬರುವ ಪ್ರತಿಯೊಂದು ವಾರ್ಡನಲ್ಲಿ ಸೈಕಲ್ ಮೂಲಕ ಮತದಾರರ ಮನೆ ಬಾಗಿಲಿಗೆ ಹೋಗಿ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡುತ್ತಿದ್ದಾರೆ. ಇಂದು ವಾರ್ಡ ನಂಬರ 43 ಮತ್ತು 29 ರಲ್ಲಿ ಸಂಚರಿಸಿ ಮತದಾರರ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಕಸ ವಿಲೇವಾರಿ, ಕುಡಿಯುವ ನೀರು ಮತ್ತು ಸಂಚಾರ ದಟ್ಟನೆಯಿಂದ ಆಗುತ್ತಿರುವ ಸಮಸ್ಯೆಗಳ ಮಹಾಪೂರವೇ ಹರಿ ಬಂದಿತು.
ವಾರ್ಡ ನಂಬರ 43 ರ ನಗರಸೇವಕಿ ವಾಣಿ ಜೋಶಿ ಮತ್ತು ವಾರ್ಡ 29 ರ ನಗರಸೇವಕ ನಿತಿನ್ ಜಾಧವ, ಜಯಂತ ಜಾಧವ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ