Latest

ಮೂರು ಕೋಟಿಯಷ್ಟು ನಷ್ಟ -ಶ್ರೀನಿವಾಸ್ ಮೂರ್ತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗಲಭೆಗೆ ಸಂಬಂಧಿಸಿದಂತೆ ಯಾರು ಈ ಕೃತ್ಯವೆಸಗಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಷ್ಟೆ. ಆದರೆ ನಾವು ಯಾರ ಮೇಲೂ ದ್ವೇಷಕ್ಕೆ ಹೋಗಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಟ್ಟಾಗಿ ಅಣ್ಣ-ತಮ್ಮಂದಿರ ರೀತಿ ಇದ್ದೇವೆ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ, ಗಲಭೆ ಕೃತ್ಯಗಳನ್ನು ಯಾರು ಮಾಡಿದ್ದಾರೆ ಎಂಬುದನ್ನು ಪೊಲೀಸರು ತನಿಖೆ ಮಾಡಲಿ. ಈ ಗಲಭೆಯಿಂದ ಏನೇನು ನಷ್ಟ ಆಗಿದೆ ಎಂದು ಒಂದು ಪಟ್ಟಿ ಮಾಡಿಕೊಡುತ್ತೇನೆ. ಮನೆ, ಮನೆಯಲ್ಲಿದ್ದ ವಸ್ತು, ದಾಖಲಾತಿ ಎಲ್ಲವೂ ಹಾಳಾಗಿದೆ. ಒಟ್ಟು ಸುಮಾರು ಮೂರು ಕೋಟಿಯಷ್ಟು ನಷ್ಟವಾಗಿದೆ. ಯಾರಿಗೆಲ್ಲಾ ಸಮಸ್ಯೆ ಆಗಿದೆ ಅವರೆಲ್ಲರಿಗೂ ಪ್ರತ್ಯೇಕ ದೂರು ಕೊಡಲು ತಿಳಿಸಲಾಗಿದೆ. ನಾನು ಪ್ರತ್ಯೇಕವಾಗಿ ದೂರು ಕೊಡುತ್ತೇನೆ. ನಾನು ಯಾರ ಹೆಸರು ಹೇಳಿಲ್ಲ, ತನಿಖೆಯ ವೇಳೆ ಪೊಲೀಸರು ಘಟನೆಯ ಬಗ್ಗೆ ಬಹಿರಂಗ ಪಡಿಸುತ್ತಾರೆ ಎಂದರು.

ಮನೆ ಸಂಪೂರ್ಣವಾಗಿ ನಾಶವಾಗಿದೆ. ನಮ್ಮ ಮನೆ ಹಾಳು ಮಾಡಿದರಲ್ಲ ಎಂಬ ದುಃಖವಿದೆ. ಯಾಕೆಂದರೆ ನಾನು ಹುಟ್ಟಿ ಬೆಳೆದಂತಹ ಮನೆ ಅದು. ನಾನು ಆ ಪಕ್ಷ, ಈ ಪಕ್ಷ ಎಂದು ಭೇದ ಭಾವ ಮಾಡಿಲ್ಲ. ಎಲ್ಲರ ಜೊತೆಗೆ ಒಟ್ಟಾಗಿ ಕೆಲಸ ಮಾಡಿದ್ದೇನೆ. ಪ್ರತಿದಿನ ನನ್ನ ಕ್ಷೇತ್ರ ಬಿಟ್ಟು ಹೊರಗೆ ಹೋಗಿಲ್ಲ. ಅಲ್ಲದೇ ನಾವು ಯಾರ ಮೇಲೂ ದ್ವೇಷಕ್ಕೆ ಹೋಗಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ನಾವೆಲ್ಲರೂ ಒಟ್ಟಾಗಿ ಇದ್ದೀವಿ. ನಮ್ಮ ಕ್ಷೇತ್ರದಲ್ಲಿ 24 ವರ್ಷದಿಂದ ಯಾವ ಘಟನೆಗಳು ಆಗಿಲ್ಲ. ಮುಂದಕ್ಕೂ ಆಗಬಾರದು ಎಂಬುದು ನನ್ನ ಆಶಯ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button