ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನೀಲ್ ಬೆನಕೆ, ಬಿಜೆಪಿ ಗ್ರಾಮೀಣ ಮೋರ್ಚಾ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಸೇರಿದಂತೆ ವಿವಿಧ ಗಣ್ಯರನ್ನು ಬೆಳಗಾವಿ ಕ್ಷತ್ರಿಯ ಮರಾಠಾ ಪರಷತ್ ವತಿಯಿಂದ ಸನ್ಮಾನಿಸಲಾಯಿತು.
ಶಾಸಕ ಅನೀಲ್ ಬೆನಕೆ ಅವರು ಮರಾಠಾ ಸಮಾಜ ಸಮುದಾಯ ಭವನಕ್ಕೆ ನೀಡಲಾದ ಜಾಗವನ್ನು ಈ ಸದುದ್ದೇಶಕ್ಕೆ ಉಳಿಸಿಕೊಡುವಲ್ಲಿ ಶ್ರಮ ವಹಿಸಿದ್ದನ್ನು ಸ್ಮರಿಸಿ ಗೌರವಿಸಿ ಸನ್ಮಾನಿಸಲಾಯಿತು.
ಈ ವೇಳೆ ಬೆಳಗಾವಿ ಜಿಲ್ಲಾ ಕ್ಷತ್ರಿಯ ಮರಾಠಾ ಪರಿಷದ್ ಅಧ್ಯಕ್ಷರೂ ಆಗಿರುವ ಶಾಸಕ ಅನೀಲ್ ಬೆನಕೆ ಅವರು ಮಾತನಾಡಿ, ಬೆಂಗಳೂರಿನ ಗೋಸಾಯಿಪುರದ ದತ್ತ ಪೀಠಮ್‌ನ ಶ್ರೀ ಮಂಜುನಾಥ ಸ್ವಾಮೀಜಿ ಅವರನ್ನು ಸ್ಮರಿಸಿದರು. ಅಲ್ಲದೇ ಮರಾಠಾ ಸಮಾಜ ಸಮ್ಮೇಳನದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮರಾಠಾ ಸಮಾಜದ ಅಭಿವೃದ್ಧಿ ಕುರಿತಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಖಾನಾಪುರ ಕ್ಷತ್ರಿಯ ಮರಾಠಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾದ ಡಾ. ಸೋನಾಲಿ ಸರ್ನೋಬತ್ ಅವರನ್ನು ಸಹ ಪರಿಷದ್ ವತಿಯಿಂದ ಸನ್ಮಾನಿಸಲಾಯಿತು. ಕೆಕೆಎಂಪಿ ಬೆಳಗಾವಿ ಮಹಾನಗರ ಅಧ್ಯಕ್ಷ ನ್ಯಾಯವಾದಿ ಎ. ಎಂ. ಪಾಟೀಲ್, ಉಪಾಧ್ಯಕ್ಷ ದಿಲೀಪ್ ಪವಾರ್, ಕಾರ್ಯದರ್ಶಿ ಸಂಜಯ್ ಭೋಸ್ಲೆ, ಖಾನಾಪುರ ಕೆಕೆಎಂಪಿ ಅಧ್ಯಕ್ಷ ಅಭಿಲಾಷ್ ದೇಸಾಯಿ ನಿಪ್ಪಾಣಿಯ ಅನೀಲ್ ಖಡೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಖಾನಾಪುರ ಕುಗ್ರಾಮಗಳಿಗೆ ಪಡಿತರ ವಿತರಣೆ ಕಲ್ಪಿಸಲು ಯಶಸ್ವಿಯಾದ ಡಾ. ಸೋನಾಲಿ ಸರ್ನೋಬತ್
https://pragati.taskdun.com/belagavi-news/dr-sonali-sarnobat-honored-the-achievers/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ