ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಶಾಸಕ ಅನಿಲ ಬೆನಕೆ ಭರತೇಶ ಶಿಕ್ಷಣ ಸಂಸ್ಥೆ ವತಿಯಿಂದ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾದ ಪ್ಲಾಸ್ಟಿಕ್ ನಿಷೇಧ ಸ್ವಚ್ಚ ಬೆಳಗಾವಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನಂತರದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿಶ್ವ ಸಂಸ್ಥೆಯು ಶೃಂಗ ಸಭೆಯಲ್ಲಿ ಇಡಿ ವಿಶ್ವಕ್ಕೆ ಸಿಂಗಲ್ ಬಳಕೆ ಪ್ಲಾಸ್ಟಿಕನ್ನು ಮುಕ್ತಗೊಳಿಸಬೇಕೆಂದು ಕರೆ ಕೊಟ್ಟಿದ್ದನ್ನು ನೆನಪಿಸಿದರು.
ಈ ಸಂದರ್ಭದಲ್ಲಿ ಚೈನಾ ಅಧ್ಯಕ್ಷರು ಭಾರತಕ್ಕೆ ಆಗಮಿಸಿದಾಗ ತಮಿಳುನಾಡಿನ ಮಹಾಬಲಿಪುರಂ ನಲ್ಲಿ ನೆಚ್ಚಿನ ಪ್ರಧಾನ ಮಂತ್ರಿಗಳು ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳಿದಾಗ ಸಮುದ್ರ ತಟದಲ್ಲಿರುವ ಪ್ಲಾಸ್ಟಿಕ್ ಗಳನ್ನು ಸಂಗ್ರಹಿಸಿ ಅಲ್ಲಿನ ಆಡಳಿತ ಮಂಡಳಿಗೆ ಚುರುಕು ಮುಟ್ಟಿಸಿದ ವಿಷಯದ ಬಗ್ಗೆ ಕಾರ್ಯಕ್ರಮದಲ್ಲಿರುವ ವಿದ್ಯಾರ್ಥಿಗಳಿಗೆ ವಿಸ್ತೃತವಾಗಿ ತಿಳಿಸಿದರು.
ಹೇಗೆ ಪ್ರಧಾನ ಮಂತ್ರಿಗಳು ಈ ಕೆಲಸ ಮಾಡಬಹುದೆಂದು ಗುರಿ ಇಟ್ಟುಕೊಂಡಿದ್ದು, ನಾವು ಕೂಡಾ ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಗಣ್ಯರು, ಶಿಕ್ಷಕ ವೃಂದ, ಹಿರಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ